ಸುದ್ದಿಗಳು

ನಾಯಕಿ ಶ‍್ರೀಲೀಲಾ ಬರ್ತಡೇ ಆಚರಿಸಿ, ವಿಶೇಷ ವಿಡಿಯೋ ಡೆಡಿಕೇಟ್ ಮಾಡಿದ ‘ಭರಾಟೆ’ ಚಿತ್ರತಂಡ

ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟಿಸುತ್ತಿರುವ ‘ಭರಾಟೆ’ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳ ಖ್ಯಾತಿಯ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಸದ್ಯ ‘ಭರಾಟೆ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ವಿಶೇಷವೆಂದರೆ ಈ ಚಿತ್ರದ ಮತ್ತೊಂದು ಅಟ್ರಾಕ್ಷನ್ ಅಂದರೆ ನಾಯಕಿ ಶ್ರೀ ಲೀಲಾ. ಅಂದ ಹಾಗೆ ಇಂದು ಈ ಚೆಲುವೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲೇ ಚಿತ್ರತಂಡದವರು ಅವರು ಬರ್ತಡೇಯನ್ನು ಆಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ‘ಭರಾಟೆ’ ಚಿತ್ರತಂಡದವರು ಬರ್ತಡೇ ವಿಶ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ತಮ್ಮ ನಾಯಕ ನಟಿಗೆ ಶುಭಾಶಯ ಕೋರಿದ್ದಾರೆ. ಹಾಗೆಯೇ ಸೆಟ್ ನಲ್ಲಿಯೇ ಶ್ರೀ ಕೇಕ್ ಕಟ್ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಮಹೇಶ್ ಕುಮಾರ್, ಚೇತನ್ ಕುಮಾರ್, ನಿರ್ಮಾಪಕ ಸುಪ್ರೀತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

#bharate, #shrileela, #teaser, #balkaninews #filmnews, #kannadasuddigalu, #srimuruli,

Tags