ಸುದ್ದಿಗಳು

10 ನೇ ವರ್ಷದ ಖುಷಿಯಲ್ಲಿ ಮುರುಳಿ ದಂಪತಿಗಳು

ನೋಡ್ತಾ ನೋಡ್ತಾ ಅದೇಷ್ಟು ಭೇಗ 10 ವರ್ಷ ಆಗೇ ಹೋಯ್ತಲ್ಲಾ ಅಂತ ನಟ ಶ್ರೀ ಮುರುಳಿ –ವಿದ್ಯಾ ದಂಪತಿಗಳು ಅಚ್ಚರಿ ಪಡ್ತಿದ್ದಾರೆ. ಕಾರಣ ಇಂದು ಅವರ ವಿವಾಹ ವಾರ್ಷಿಕೋತ್ಸವದ ದಿನ. ಹೀಗಾಗಿ ಈ ದಂಪತಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ.

ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ಎಂದು ಮದುವೆ ಆಗಿದ್ದರು. ಈ ದಂಪತಿಗಳಿಗೆ ಇದೀಗ 8 ವರ್ಷದ ಅಗಸ್ತ್ಯ ಹಾಗೂ 4 ವರ್ಷದ ಅಥೀವಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇವರು ವಸ್ತ್ರ ವಿನ್ಯಾಸಕ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರೆ. ಶ್ರೀ ಮುರಳಿ ಮತ್ತು ವಿದ್ಯಾರ ಸ್ನೇಹ ಚಿಗುರಿದ್ದು ಕಾಲೇಜಿನಲ್ಲಿ. 10 ವರ್ಷ ಪ್ರೀತಿಸಿ, ನಂತರ ಮದುವೆಯಾದವರು.

ನಟ ಶ್ರೀ ಮುರುಳಿ ಅವರಿಗೆ ಬ್ರೇಕ್ ನೀಡಿದ್ದು ಉಗ್ರಂ ಸಿನಿಮಾ. ಚಂದ್ರಚಕೋರಿ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ಮುರುಳಿಯವರಿಗೆ ಆನಂತರದಲ್ಲಿ ಅನೇಕ ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ. ಈ ನಡುವೆ ಹೆಸರನ್ನೂ ಬದಲಾಯಿಸಿಕೊಂಡರು. ಮುರುಳಿ ದೇವ್ ಆದರು, ಮುರುಳಿಧರ ಆದರು. ಕೊನೆಗೆ ಶ್ರೀ ಮುರುಳಿ ಆಗಿ ಇದೀಗ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದಾರೆ. ಮಪ್ತಿ ಚಿತ್ರದ ಯಶಸ್ಸಿನ ನಂತರ ಅವರ ಹೊಸ ಸಿನಿಮಾವನ್ನು ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ.

“ಉಗ್ರಂ’ ಚಿತ್ರ ಬಂದ ಬಳಿಕ ಮುರಳಿಯನ್ನು ಆ್ಯಕ್ಷನ್ ಸ್ಟಾರ್ ಎಂಬಂತೆ ಬಿಂಬಿಸಲಾಗುತ್ತಿದೆ. ಅವರಿಗೆ ಬರುತ್ತಿರುವ ಪಾತ್ರಗಳೆಲ್ಲವೂ ಆ್ಯಕ್ಷನ್ ಪಾತ್ರಗಳೇ. ಆದರೆ, ನಾನು ಅವರನ್ನು ರೋಮ್ಯಾಂಟಿಕ್ ಚಿತ್ರಗಳಲ್ಲಿ ನೋಡಲು ಬಯಸುತ್ತೇನೆ” ಎಂದು ವಿದ್ಯಾ ಅವರು ಹೇಳುತ್ತಾರೆ. ಮತ್ತು ಈ ಬಗ್ಗೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

“ಕಳೆದ ಕೆಲವು ದಿನಗಳು ಕಷ್ಟಕರವಾಗಿದ್ದವು. ಮತ್ತು ನಾನು ಅದೇ ರೀತಿಯ ನೋವಲ್ಲಿದ್ದರೂ ಸಹ ನನ್ನನ್ನು ಮಗುವಿನಂತೆ ನೋಡುತ್ತಿದ್ರಿ. ‘ನಮ್ಮ ಕಷ್ಟದ ದಿನದಲ್ಲಿ ನೀವು ಬೆಳಕು ಮೂಡುವಂತೆ ಮಾಡಿದ್ರಿ. ನನ್ನ ಮುಖದಲ್ಲಿ ನಗು ತರಿಸಿದ್ರಿ. ಅಗತ್ಯ ಇದ್ದಾಗ ತಾಯಿಯ ರೀತಿ ನನ್ನ ಜೊತೆಗೆ ಇದ್ರಿ.

ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂಬುದು ಸಹ ನಮ್ಮ ಹಾರೈಕೆ.

Tags

Related Articles