ಸುದ್ದಿಗಳು

ರಿಮೇಕ್ ಚಿತ್ರದ ಮೂಲಕ ಬಂದ ಶ್ರೀನಗರ ಕಿಟ್ಟಿ

ಪೋಷಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ನಾಯಕನಟರಾಗಿ ಗುರುತಿಸಿಕೊಂಡವರಲ್ಲಿ ಶ್ರೀನಗರ ಕಿಟ್ಟಿ ಸಹ ಒಬ್ಬರು. ಈಗಾಗಲೇ 25 ಕ್ಕೂ ಹೆಚ್ಚಿನ ಸಿನಿಮಾ ಮಾಡಿರುವ ಅವರು ಬಹಳ ದಿನಗಳ ನಂತರ ಚಿತ್ರರಂಗಕ್ಕೆ ಮರಳಿದ್ದಾರೆ.

ಈಗಾಗಲೇ  ಶರಣ್ ಅಭಿನಯದ ‘ಅವತಾರ್ ಪುರುಷ’ ಚಿತ್ರದಲ್ಲಿ ಮಂತ್ರವಾದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಗರ ಕಿಟ್ಟಿ ಇದೀಗ ರಿಮೇಕ್ ಚಿತ್ರವೊಂದರ ಮೂಲಕ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ತೆಲುಗಿನ ‘ಕೇರಾಫ್ ಕೆಂಚರಪಾಳ್ಯಂ’ ಚಿತ್ರವು ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಶ್ರೀನಗರ ಕಿಟ್ಟಿ ಮತ್ತು ‘ಗಂಟುಮೂಟೆ’ ಖ್ಯಾತಿಯ ತೇಜು ಬೆಳವಾಡಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿಂಪಲ್ ಸುನಿ ಅವರೊಂದಿಗೆ ಕೆಲಸ ಮಾಡಿರುವ ಓಂ ರಘು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಾಯಕನಾಗಿ ಎಂಟ್ರಿ ಕೊಟ್ಟ ಎಸ್ ನಾರಾಯಣ್ ಪುತ್ರ

#ShriNagar #ShriNagarMovie #KannadaSuddigalu

Tags