ಸುದ್ದಿಗಳು

ಅಭಿಮಾನಿಯ ಆಸೆಯಂತೆ ತನ್ನ ಮೊಬೈಲ್ ನಂಬರ್ ನೀಡಿದ ಶ್ರೀ ನಿಧಿ ಶೆಟ್ಟಿ…!!!

ಸದ್ಯ ‘ಕೆ.ಜಿ.ಎಫ್-ಚಾಫ್ಟರ್ 2’ ಚಿತ್ರದಲ್ಲಿ ಬ್ಯುಸಿಯಾಗಿರುವ ಶ್ರೀನಿಧಿ

ಬೆಂಗಳೂರು.ಮಾ.26: ‘ಕೆ.ಜಿ.ಎಫ್’ ಚಿತ್ರದ ಮೂಲಕ ಲಾಂಚ್ ಆದ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದ ಮೂಲಕವೇ ಇಡೀ ಇಂಡಿಯಾದ ತುಂಬ ಫೇಮಸ್ ಆದರು. ಹೀಗೆ ದೊಡ್ಡ ಯಶಸ್ಸು ಪಡೆದಿರುವ ಶ್ರೀನಿಧಿ ಅಭಿಮಾನಿಗಳ ಪ್ರೀತಿಗೆ ಬೆಲೆ ನೀಡುತ್ತಾರೆ. ಯಶ್ ರಂತೆಯೇ ಇವರೂ ಸಹ ನ್ಯಾಶನಲ್ ಸ್ಟಾರ್ ಆಗಿದ್ದಾರೆ.

ಇನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕೇಳಿದ ತಕ್ಷಣ ತಮ್ಮ ನಂಬರ್ ಕೊಡುವುದಿಲ್ಲ. ಅದರಲ್ಲೂ ನಟಿಯರು ಕೊಡುವುದೇ ಇಲ್ಲ. ಆದರೆ, ಅಭಿಮಾನಿಯೊಬ್ಬರು ತನ್ನ ಮೊಬೈಲ್ ನಂಬರ್ ಕೇಳಿದ್ದಕ್ಕೆ ಶ್ರೀ ನಿಧಿ ಶೆಟ್ಟಿ ಮೊಬೈಲ್ ನಂಬರ್ ಕೊಟ್ಟಿದ್ದಾರೆ.Image result for srinidhi shetty kgf

ಹೌದು ,  ಇತ್ತೀಚಿಗೆ ನಟಿ ಶ್ರೀನಿಧಿ ಶೆಟ್ಟಿ ‘ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿ’ ಎಂದಿದ್ದರು. ಅಭಿಮಾನಿಗಳ ಪ್ರಶ್ನೆಗೆ ತಾವು ಉತ್ತರಿಸುವುದಾಗಿಯೂ ಹೇಳಿದ್ದರು. ಅಭಿಮಾನಿಗಳಲ್ಲೊಬ್ಬ ಶ್ರೀನಿಧಿ ಶೆಟ್ಟಿಯವರ ನಂಬರನ್ನೇ ಕೇಳಿಬಿಟ್ಟಿದ್ದಾನೆ. ಕೊಡಲ್ಲ ಅಂದುಕೊಂಡಿದ್ದ ಅವನಿಗೆ ಶಾಕ್ ಕಾದಿತ್ತು! ಏಕೆಂದರೆ, ಅವರು ತಮ್ಮ ಮೊಬೈಲ್ ನಂಬರ್ ಕೊಟ್ಟರು.

ಶ್ರೀನಿಧಿ ಶೆಟ್ಟಿಯ ಮೊಬೈಲ್ ನಂಬರ್ ಸಿಕ್ಕ ಕೂಡಲೇ ಆ ಅಭಿಮಾನಿಗೆ ನಂಬಲು ಸಾಧ್ಯವಾಗಿಲ್ಲ. ತಕ್ಷಣ ಟ್ರೂ ಕಾಲರ್ ನಲ್ಲಿ ಹಾಕಿ ನೋಡಿದ್ದಾರೆ. ಅದು ಅವರದ್ದೇ ನಂಬರ್ ಆಗಿತ್ತು. ನಟಿಯ ಅಭಿಮಾನಿಯಾಗಿರುವ ಅವರು ಸಖತ್ ಖುಷಿಯಾಗಿದ್ದಾರೆ.

ಇನ್ನು ಅಭಿಮಾನಿಯ ಕೋರಿಕೆಯನ್ನು ಸ್ಪಂದಿಸಿದ ರೀತಿಗೆ ಶ್ರೀ ನಿಧಿ ಶೆಟ್ಟಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರೆ, ಹಲವರು ಮೆಚ್ಚಿ ಮೆಸೇಜ್ ಮಾಡಿದ್ದಾರೆ. ಒಟ್ಟಿನಲ್ಲಿ,  ಆ ಅಭಿಮಾನಿಯ ಬಗ್ಗೆ ಅಷ್ಟು ನಂಬಿಕೆಯೋ ಅಥವಾ ತಮ್ಮ ಬಗ್ಗೆಯೇ ಅಷ್ಟು ಕಾನ್ಫಿಡೆನ್ಸೊ ಎಂಬುದು ಕೆಲವರಿಗೆ ಪ್ರಶ್ನೆಯಾಗಿ ಕಾಡುತ್ತಿದೆ ಎನ್ನಬಹುದು.

‘ಕೆ.ಜಿ.ಎಫ್’ ಚಿತ್ರದ ಮೂಲಕ ಯಶಸ್ಸಿನ ಮೆಟ್ಟಿಲು ಏರಿರುವ ಶ್ರೀನಿಧಿ ಸದ್ಯ ಈ ಚಿತ್ರದ ಎರಡನೇ ಭಾಗದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಮಾಡಿದ್ದು ಒಂದೇ ಸಿನಿಮಾವಾದರೂ ಅಪಾರ ಅಭಿಮಾನಿಗಳ ಮನ ಗೆದ್ದಿರುವ ಈ ನಟಿ ಮತ್ತಷ್ಟು ಎತ್ತರಕ್ಕೆ ಏರಲಿ ಎಂಬುದು ನಮ್ಮದೂ ಸಹ ಹಾರೈಕೆ.

ನಯನತಾರಾ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ ತಮಿಳು ಹಿರಿಯ ನಟ!!

#shrinidhishetty, #mobilenumber, #balkaninews #kgf, #yash, #prashanthneel, #kgf2, #filmnews

Tags