ಸುದ್ದಿಗಳು

ಅವಕಾಶಗಳಿಲ್ಲದಿದ್ದರೂ ಈಕೆಗೇಕೆ ಇಷ್ಟೊಂದು ಸಂಭಾವನೆ!!?!!

ಶೃತಿ ಹಾಸನ್ ಟಾಲಿವುಡ್ ಚಿತ್ರರಂಗಕ್ಕೆ ಮತ್ತೆ ಬಲಗಾಲಿಟ್ಟಿದ್ದು ಗೊತ್ತೇ ಇದೆ.. .  ಮಾಸ್ ಮಹಾರಾಜ ರವಿ ತೇಜ ಅವರ ಚಿತ್ರದಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಇದನ್ನು ಗೋಪಿಚಂದ್ ಮಲಿನಿನಿಯವರು ನಿರ್ದೇಶಿಸಲಿದ್ದಾರೆ. ಇತ್ತೀಚಿನ ಗಾಸಿಪ್ ಪ್ರಕಾರ, ಶ್ರುತಿ ಹಾಸನ್  ಎಲ್ಲರಿಗೂ ಈಗ ಶಾಕಿಂಗ್ ನ್ಯೂಸ್ ನೀಡಿದ್ದಾಳೆ.. ಕಮಲ್ ಹಾಸನ್ ಅವರ ಹಿರಿಯ ಮಗಳು ಶೃತಿ ತೆಲುಗು ಚಿತ್ರಕ್ಕಾಗಿ 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದಾಳಂತೆ.. ಈಗ ತಯಾರಕರು ಈ ಬೇಡಿಕೆಯನ್ನು ಪೂರೈಸುತ್ತಾರೆಯೋ ಅಥವಾ ಇಲ್ಲವೋ ಎಂದು ಕಾಯಬೇಕು.

Image result for shruthi hassan photos hot

 

ಕಾಲಿವುಡ್ ನಲ್ಲಿ ಶೃತಿ ಹಾಸನ್ ಕಟಮರಾಯುಡು ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು, ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ರೊಮ್ಯಾನ್ಸ್ ಮಾಡಿದ್ದಳು , 2017 ರಲ್ಲಿ ಈ ಚಿತ್ರವು ಬಿಡುಗಡೆಯಾಗಿತ್ತು.

ರವಿ ತೇಜಾರ ಅಭಿನಯದ ಮುಂದಿನ ಚಿತ್ರ ಸೆಪ್ಟೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ನಿರ್ದೇಶಕ ನಿರೂಪಿಸಿದ ಕಥೆ- ರವಿ ತೇಜಾಗೆ ತುಂಬಾ ಇಷ್ಟವಾಗಿದೆಯಂತೆ… ಸ್ಕ್ರಿಪ್ಟ್ ಕೆಲಸ ಮುಗಿಯಲು ಇನ್ನೂ ಕೆಲವು ತಿಂಗಳು ಭೇಕಾಗುತ್ತದೆ  ಮತ್ತು ಅದೇ ವೇಳೆಗೆ ರವಿ ತೇಜಾ ‘ಡಿಸ್ಕೋ ರಾಜಾ’ ಚಿತ್ರೀಕರಣವನ್ನು ಮುಗಿಸಲಿದ್ದಾರೆ.

ಕೊನೆಗೂ ತಾಯ್ತನದ ಬಗ್ಗೆ ಮನಬಿಚ್ಚಿ ಮಾತನಾಡಿದ ದೀಪಿಕಾ ಪಡುಕೋಣೆ

#shruthihassan #shruthihassanremuneration #shruthihassanexboyfriend

Tags