ಸುದ್ದಿಗಳು

ಫೋಟೋ ಶೂಟ್ ಮಾಡಿಸಿಕೊಂಡ ಮಾಡೆಲಿಂಗ್ ಕಮ್ ನಟಿ ಶುಭಾ ರಕ್ಷಾ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’, ಹೊಸಬರ ‘ಗುಡುಗು’, ‘ಆ್ಯಪಲ್ ಕೇಕ್, ಮೂಕವಿಸ್ಮಿತ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್ ಕಮ್ ನಟಿ ಶುಭ ರಕ್ಷಾ. ಇವರು ಕನ್ನಡ ಮಾತ್ರವಲ್ಲದೇ ತಮಿಳಿನಲ್ಲಿ ‘ವೈಫೈ’, ‘ಎಫ್ ಬಿ’ ಚಿತ್ರಗಳಲ್ಲೂ ನಟಿಸಿದ್ದು, ಸದ್ಯ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಕ್ಲಾಸ್ ಮತ್ತು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಶುಭಾ ರಕ್ಷಾ ತಾವು ನಟಿಸುವ ಸಿನಿಮಾಗಳಲ್ಲೂ ಅಷ್ಟೇ ವೈವಿದ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೀರೆಯುಟ್ಟು ಕ್ಲಾಸಿಕಲ್ ಆಗಿಯೂ ಕಾಣಿಸಿಕೊಳ್ಳುವ ಅವರಿಗೆ ಮಾಡ್ರನ್ ಬಟ್ಟೆ ತೊಟ್ಟು ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳುತ್ತಾರೆ.

ಅಂದ ಹಾಗೆ ಶುಭ ರಕ್ಷಾ ಬರೀ ಹಿರಿತೆರೆ ಮಾತ್ರವಲ್ಲದೇ, ಕೆಲ ಸೀರಿಯಲ್ ಗಳಲ್ಲಿಯೂ ನಟಿಸಿದ್ದು, ಉಪೇಂದ್ರ ನಟನೆಯ ‘ಹೋಂ ಮಿನಿಸ್ಟರ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಈ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

‘ಕನ್ನಡದೊಂದಿಗೆ ಪರಭಾಷೆಯಲ್ಲೂ ನಟಿಸಲು ಅವಕಾಶಗಳು ಅರಸಿ ಬರುತ್ತಿವೆ. ಹಾಗಂತಾ ಬಂದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಕತೆ ಮತ್ತು ಪಾತ್ರ ಉತ್ತಮವಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಆದರೆ , ಕೆಲವೊಮ್ಮೆ ಭಾಷೆಯ ಚಿತ್ರರಂಗದಲ್ಲಿ ಸೂಕ್ತ ಅವಕಾಶಗಳು ಸಿಗದಿರುವಾಗ ನಾವು ಪರಭಾಷೆಯಲ್ಲಿ ನಟಿಸುವುದು ಅನಿವಾರ್ಯ’ ಎನ್ನುತ್ತಾರೆ ಶುಭ ರಕ್ಷಾ.

ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

#shubharaksha #photoshoot #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags