ಸುದ್ದಿಗಳು

ಮಾಜಿ ಭುವನ ಸುಂದರಿಗೆ ಇದು 11 ನೇ ಲವ್ ಅಂತೆ…!

ಸುಷ್ಮಿತಾ ಸೇನ್‌ಗೆ ಈಗ ಮತ್ತೆ ಲವ್ವಾಗಿದೆ

ಮುಂಬೈ,ನ,12: ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ಗೆ ಈಗ ಮತ್ತೆ ಲವ್ವಾಗಿದೆ. ಹೌದು, ಈಗಾಗಲೇ ಹತ್ತು ಬಾರಿ ಲವ್ವಾಗಿ, ಬ್ರೇಕಾಗಿ, ಬ್ರೇಕಾದಾಗ ಮಂಕಾಗಿ ಸುದ್ದಿಯಾಗಿರುವ ಸುಷ್ಮಿತಾ, ತನ್ನ ಹೊಸ ಸಂಗಾತಿಯ ಬಗ್ಗೆ ರಹಸ್ಯ ಕಾಪಾಡುತ್ತಿಲ್ಲ. ಪ್ರತಿ ಬಾರಿ ಹೊಸ ಸಂಗಾತಿಯನ್ನು ಕಂಡುಕೊಂಡಾಗಲೂ ಈಕೆ ಬಿಂದಾಸ್‌ ಆಗಿ ಫೋಟೊ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು ವಿಶೇಷ.

44 ವರ್ಷದ ಸುಷ್ಮಿತಾ-27 ವರ್ಷದ ರೊಹ್ಮನ್ …!

ಸುಷ್ಮಿತಾ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ರೊಹ್ಮನ್‌ ಶಾವುಲ್‌ ಎಂಬ ರೂಪದರ್ಶಿಯನ್ನು. ವಿಶೇಷ ಏನಪ್ಪಾ ಅಂದರೆ, ಸುಷ್ಮಿತಾ ಮತ್ತು ರೊಹ್ಮನ್‌ ವಯಸ್ಸಿನ ಅಂತರ 16 ವರ್ಷ! ಇದೇ ನ.19ರಂದು ಸುಷ್ಮಿತಾ 44ಕ್ಕೆ ಕಾಲಿಡುತ್ತಾರೆ.ರೊಹ್ಮನ್‌ಗೆ ಈಗ 27. ಸುಷ್ಮಿತಾ ಅವರ ಮೊದಲ ದತ್ತು ಮಗಳು ರೆನೆ ಸೇನ್‌ ಗೆ ಈಗ 18 ವಯಸ್ಸು.

 

ಸದ್ಯ ಸುಷ್ಮಿತಾ ಈಗ ಸಿಂಗಲ್ …!

11ನೇ ಸಂಗಾತಿ ಎನ್ನುವುದಕ್ಕಿಂತಲೂ ಆತನ ವಯಸ್ಸಿನ ಕಾರಣಕ್ಕೆ ಸುಷ್ಮಿತಾ ಈಗ ಚರ್ಚೆಯ ಕೇಂದ್ರವಾಗಿದ್ದಾರೆ. ತಮಗಿಂತ ಹತ್ತಿಪ್ಪತ್ತು ವರ್ಷ ಚಿಕ್ಕವರನ್ನು ಸಂಗಾತಿಯಾಗಿ ಆರಿಸಿಕೊಳ್ಳುವುದು, ಮದುವೆಯಾಗುವುದು ಹಿಂದಿ ಚಿತ್ರರಂಗದಲ್ಲಿ ಹೊಸದೇನಲ್ಲ. ಸದ್ಯ ಸುಷ್ಮಿತಾ ಸೇನ್‌ ಅವಿವಾಹಿತೆ. ಅವರು ಬದುಕಲ್ಲಿ ಒಂಟಿಯಾಗಿದ್ದುದು ಕಡಿಮೆ. ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಣ್ಮೆ ತೋರುವ ಈಕೆ ಸಂಬಂಧ ಸ್ವಲ್ಪ ಹಳಸುತ್ತಿದ್ದಂತೆ ದೂರವಾಗಿ ಬಿಡುತ್ತಾರೆ.

ಸುಷ್ಮಿತಾ ಮಕ್ಕಳ ಮುಂದೆಯೇ ರೊಮ್ಯಾಂಟಿಕ್‌ …!

ಸುಷ್ಮಿತಾ ಮಕ್ಕಳ ಮುಂದೆಯೇ ರೊಮ್ಯಾಂಟಿಕ್‌ ಆಗಿ ಇರುತ್ತಾರಂತೆ. ಈ ಬಾರಿಯ ದೀಪಾವಳಿಯ ಮೊದಲ ದಿನವನ್ನು ಸಂಗಾತಿ ಮತ್ತು ಮಕ್ಕಳೊಂದಿಗೇ ಅವರು ಕಳೆದಿದ್ದರು.

ಮನಮೋಹಕ  ಅಂಗಾಂಗಸೌಷ್ಠವ, ಎತ್ತರದ ನಿಲುವು, 44 ಆದರೂ ಹೊಳೆಯುವ ಮೈಕಾಂತಿ, ತೋರ ಎದೆಭಾರ, ಆಕರ್ಷಕ ಪೃಷ್ಠ – ನೀಳ ಬಳುಕುವ ಸೊಂಟ – ಹರವಾದ ಬೆಳ್ಳನೆ ಬೆನ್ನು ಅಬ್ಬಾ ಹತ್ತೂ ಪುರುಷರೊಡನೆ ಬೆರೆತರೂ ಬರಿದಾಗದ ಯೌವನ, ಉಕ್ಕಿಹರಿವ ನಗೆ, ಕುಡಿನೋಟದ ಸೆಳೆತಕ್ಕೆ ಬಾಗದವ, ಬೀಳದವ ಅರಸಿಕನೇ ಸರಿ! ಅಂಥಾ ಸುಂದರ ನೋಟದಿಂದ ಗಮನ ಸೆಳೆಯುತ್ತಾರೆ ಸುಷ್ಮಿತಾ..! ಆದ್ರೆ ರೊಹ್ಮನ್ ಜೊತೆಗಿನ ನಂಟು ಎಷ್ಟು ಕಾಲ ಮುಂದುವರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags

Related Articles