ಸುದ್ದಿಗಳು

‘ಶೈಲಜಾ ರೆಡ್ಡಿ ಅಲ್ಲುಡು’ ಗೆ ಬಿಡುಗಡೆ ಭಾಗ್ಯ!

ಹೈದರಾಬಾದ್. ಆ.01: ಟಾಲಿವುಡ್ ಚಿತ್ರರಂಗದ ಬಹುಬೇಡಿಕೆಯ ನಟ ನಾಗಚೈತನ್ಯ ಮತ್ತು ಅನು ಇಮ್ಮಾನ್ಯುಯಲ್ ಜೊತೆಯಾಗಿ ನಟಿಸುತ್ತಿರುವ ನೂತನ ಚಿತ್ರ ‘ಶೈಲಜಾ ರೆಡ್ಡಿ ಅಲ್ಲುಡು’ ಬೆಳ್ಳಿ ತೆರೆಗೆ ಅಪ್ಪಳಿಸಲು, ಭರ್ಜರಿ ತಯಾರಿ ನಡೆಸುತ್ತಿದೆ. ‘ಮಹಾನುಬಾವುಡು’ ಸಿನೆಮಾದ ಘನ ವಿಜಯದ ಬಳಿಕ ನಿರ್ದೇಶಕ ಮಾರುತಿ, ಕೌಟುಂಬಿಕ ಮನೋರಂಜನಾತ್ಮಕ ಚಿತ್ರಕ್ಕೆ ಯಾಕ್ಷನ್ ಕಟ್ ಹೇಳಲಿದ್ದಾರೆ. ಸಿತಾರ ಎಂಟರ್ಟೈನ್ಮೆಂಟ್ ಬ್ಯಾನರ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ ಎಂದು ಸಿನಿಮೂಲಗಳು ತಿಳಿಸಿವೆ.

ಅತ್ತೆಯ ಪಾತ್ರದಲ್ಲಿ ರಮ್ಯಕೃಷ್ಣ

ದಕ್ಷಿಣ ಭಾರತದ ಸಂವೇದನಾತ್ಮಕ ನಟಿ ರಮ್ಯಕೃಷ್ಣ  ಚಿತ್ರದಲ್ಲಿ ಅತ್ತೆಯ ಪಾತ್ರ ನಿರ್ವಹಿಸಲಿದ್ದಾರಂತೆ. ಗೋಪಿಸುಂದರ್ ಅವರು ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನುನಿರ್ವಸಲಿದ್ದಾರೆ. ಸದ್ಯ, ಸಿನೆಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಶರ ವೇಗದಲ್ಲಿ ಸಾಗುತ್ತಿದ್ದು, ಇದೇ ಆಗಸ್ಟ್ 31ಕ್ಕೆ ಬೆಳ್ಳಿ ಪೆರೆದೆಗೆ ಲಗ್ಗೆ ಇಡಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

Tags