ಸುದ್ದಿಗಳು

ಕೀಕಿ ಚಾಲೆಂಜ್ ಆಯ್ತು, ಈಗ ಸಿದ್ಧಾರ್ಥ್ ನೀಡಿದರು ಅಭಿಮಾನಿಗಳಿಗೆ ಹೊಸ ಚಾಲೆಂಜ್..

ಕೇರಳ,ಆ.20: ಈಗ ಏನಿದ್ದರೂ ಕೀಕಿ ಚಾಲೆಂಜ್ ನಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಇಂತಹ ಚಾಲೆಂಜ್ ನನ್ನು ಜನರನ್ನು ಸಮಾಜದ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ನಟ ಸಿದ್ಧಾರ್ಥ್ ಗೆ ಉಪಾಯ ಸಿಕ್ಕಿದೆ. ಕೇರಳದಲ್ಲಿ ಪ್ರವಾಹ ಬಂದು ಎಲ್ಲಾ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಪೀಡಿತ ಕೇರಳದ ಜನರಿಗೆ ಸಹಾಯ ಮಾಡಲು ಮುಂದಾಗಿರುವ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ಚಾಲೆಂಜ್ ಜನರಿಗೆ ನೀಡಿದ್ದಾರೆ.

ಏನಿದು ಹೊಸ ಚಾಲೆಂಜ್!!

‘ಕೇರಳ ಡೊನೇಷನ್ ಚಾಲೆಂಜ್’ ಸ್ವೀಕರಿಸಲು ಸಿದ್ಧಾರ್ಥ್ ಕರೆ ನೀಡಿದ್ದಾರೆ. ಕೇರಳದ ಜನರಿಗೆ ನೀಡಿದ ಹಣ ಅಥವಾ ವಸ್ತು ಏನೇ ಇದ್ದರೂ ಸರಿ, ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕುವಂತೆ ಸಿದ್ಧಾರ್ಥ್ ಎಲ್ಲರಲ್ಲಿ ವಿನಂತಿ ಮಾಡಿದ್ದಾರೆ. ಸಿದ್ದಾರ್ಥ್ 10 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿ, ಅದರ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ‘ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ.. ನಾನು ಕೇರಳ ಡೊನೇಷನ್ ಚಾಲೆಂಜ್ ಸ್ವೀಕರಿಸಿದ್ದೇನೆ. ತುಂಬಾ ಚೆನ್ನಾಗಿತ್ತು. ನೀವು ಇದನ್ನು ಮಾಡಿ ಎಂದು ಸಿದ್ಧಾರ್ಥ್ ಟ್ವಿಟ್ ಮಾಡಿದ್ದಾರೆ’. ಸಿನಿಮಾ ಸ್ಟಾರ್ ನಟರು ಹೇಳಿದರೆ ಸಾಕು ಅಭಿಮಾನಿಗಳು ಏನನ್ನೂ ಬೇಕಾದರೂ ಮಾಡಲು ಮುಂದಾಗುತ್ತಾರೆ. ಹಾಗಾಗಿ ಕೇರಳ ಜನರಿಗೆ ನೆರವಾಗಲು ಸಿದ್ಧಾರ್ಥ್ ಈ ಯೋಜನೆಯನ್ನು ಮುಂದಿಟ್ಟಿದ್ದಾರೆ.

 

Tags