ಸುದ್ದಿಗಳು

ಧಾರಾವಾಹಿಯಿಂದ ಸಿನಿಮಾಗೆ ಎಂಟ್ರಿ ಕೊಟ್ಟ ಸಿದ್ದು ಮೂಲಿಮನಿ

‘ಓ’ ಚಿತ್ರದಲ್ಲಿ ನಾಯಕನಟರಾಗಿ ನಟನೆ

ಬೆಂಗಳೂರು.ಫೆ.12

ಈಗಾಗಲೇ ಕಿರುತೆರೆಯಿಂದ ಹಿರಿತೆರೆಗೆ ಬಹಳಷ್ಟು ಜನರು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಈಗಾಗಲೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಪ್ರತಿಭೆ ಸಿದ್ದು ಮೂಲಿಮನಿ ಈಗಾಗಲೇ ಬೆಳ್ಳಿತೆರೆಗೆ ಕಾಲಿಟ್ಟು ‘ರಂಗಿತರಂಗ’, ‘ಟೋರ ಟೋರ’, ‘ಲಂಬೋದರ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಓ..

ಈಗಾಗಲೇ ‘ಪಾರು’ ಧಾರಾವಾಹಿಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಸಿದ್ದು ಮೂಲಿಮನಿ ಈಗ ‘ಓ..’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಟರಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಮಿಲನಾ ನಾಗರಾಜ್ ಹಾಗೂ ಸೋನಿಕಾ ಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಥಾಹಂದರ

ಅಂದ ಹಾಗೆ ಇದೊಂದು ಹಾರರ್​ ಜತೆಗೆ ತ್ರಿಕೋನ ಪ್ರೇಮ ಕಥೆಯ ಚಿತ್ರವಾಗಿದ್ದು, ಹ್ಯಾಟ್ರಿಕ್​ ಡೈರೆಕ್ಟರ್​​​​​ ಪ್ರೇಮ್​​​ ಬಳಿ ಕೆಲಸ ಮಾಡಿರುವ ಮಹೇಶ್​​ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬುಲೆಟ್ ಪ್ರಕಾಶ್, ಶ್ರಾವ್ಯ ಗಣಪತಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದು, ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಲಿದೆ.

“ನೀವು ಸಿನಿಮಾ ನೋಡಿದರೆ ಖಂಡಿತ ‘ಓ’ ಎಂಬುದರ ಅರ್ಥ ತಿಳಿಯುತ್ತದೆ. ಇನ್ನು ಚಿತ್ರದ ಕಥೆ ನಾನ್ ಲಿನಿಯರ್ ತರಹ ಇದೆ. ಕಥೆ ಬಹಳ ಇಷ್ಟವಾಯ್ತು.” ಎಂದು ನಟ ಸಿದ್ದು ಹೇಳುತ್ತಾರೆ.

ವಿಭಿನ್ನ ಶೀರ್ಷಿಕೆ

ಇನ್ನು ಚಿತ್ರದ ಟೈಟಲ್ ಬಗ್ಗೆ ಹೇಳುವುದಾದರೆ, ಇದೊಂದು ವಿಭಿನ್ನ ಟೈಟಲ್ ಆಗಿದೆ. ಇನ್ನು ನಟನಾಗಬೇಕು ಎಂಬ ಹಂಬಲದಿಂದ ಸ್ಯಾಂಡಲ್ ​​​​ವುಡ್ ​​​ಗೆ ಎಂಟ್ರಿ ಕೊಟ್ಟಿದ್ದ ಕಿರಣ್ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

ಕಿರುತೆರೆಯಿಂದ ಬಂದ ಅನೇಕರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಂತೆಯೇ ಸಿದ್ದು ಮೂಲಿಮನಿಯವರಿಗೂ ಯಶಸ್ಸು ಸಿಗಲಿ..

ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

#siddumulimani, #balkaninews #filmnews, #o, #kannadasuddigalu

Tags