ಸುದ್ದಿಗಳು

ನೋಡುಗರಿಂದ ಪ್ರಶಂಸೆ ಪಡೆದ ‘ಸಿಡಿದೆದ್ದ ಗಂಡು’ ಟ್ರೈಲರ್

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಪ್ರಯೋಗಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡದವರು ‘ಸಿಡಿದೆದ್ದ ಗಂಡು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದಿದ್ದಾರೆ.

ಹೌದು, ‘ಸಿಡಿದೆದ್ದ ಗಂಡು’ ಚಿತ್ರದ ಮೂಲಕ ಹೊಸಬರು ಚಿತ್ರರಂಗಕ್ಕೆ ಬಂದಿದ್ದರೂ ಸಹ ಅನುಭವವನ್ನು ಹೊಂದಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡುಗರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಶ್ರೀ ವಿಷ್ಣುರವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಅವರಿಗೆ ಜೋಡಿಯಾಗಿ ಶೋಭಿತಾ ನಟಿಸಿದ್ದಾರೆ.

ಅಂದ ಹಾಗೆ ಈ ಚಿತ್ರವನ್ನು ವಸಂತಕುಮಾರಿಯವರು ನಿರ್ಮಿಸಿದ್ದು, ಇವರ ಮಗನೇ ಈ ಚಿತ್ರದ ನಾಯಕ ನಟರಾಗಿದ್ದಾರೆ. ಈ ಚಿತ್ರವು ಹಾರರ್ ಮತ್ತು ಸಸ್ಪೆನ್ಸ್ ಕಥಾಹಂದರವನ್ನು ಒಳಗೊಂಡಿದೆ.

‘ಇದೊಂದು ಆ್ಯಕ್ಷನ್ ಮತ್ತು ಲವ್ ಚಿತ್ರವಾಗಿದ್ದು, ತರುಣರ ತಂಡವೊಂದು ಪ್ರವಾಸ ಹೊರಟಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳು ನಡೆಯುತ್ತದೆ, ಒಬ್ಬೊಬ್ಬರೇ ಕೊಲೆ ಆಗುತ್ತಾರೆ, ಈ ರಹಸ್ಯವನ್ನು ಹೇಗೆ ಭೇದಿಸುತ್ತೇನೆ ಎಂಬುದೇ ಚಿತ್ರದ ಕಥೆ’ ಎಂದು ನಾಯಕ ನಟ ಶ್ರೀವಿಷ್ಣು ಹೇಳಿದ್ದಾರೆ.

ಇನ್ನು ಚಿತ್ರದಲ್ಲಿ 6 ಹಾಡುಗಳಿದ್ದು, ದೊಡ್ಡರಂಗೇಗೌಡರು ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ನಿರ್ದೇಶಕ ವಿಠಲ್ ಕುಮಾರ್ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದಾರೆ. ಅಂದ ಹಾಗೆ 90 ರ ದಶಕದಲ್ಲಿ ಟೈಗರ್ ಪ್ರಭಾಕರ್ ಅಭಿನಯದಲ್ಲಿ ‘ಸಿಡಿದೆದ್ದ ಗಂಡು’ ಚಿತ್ರ ಬಿಡುಗಡೆಯಾಗಿತ್ತಾದರೂ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಇಲ್ಲವೆಂದು ಚಿತ್ರತಂಡದವರು ಸ್ಪಷ್ಪಪಡಿಸಿದ್ದಾರೆ.

‘ಮಜಾಭಾರತ’ ದ ಮೂಲಕ ಮನ ಸೆಳೆಯುತ್ತಿರುವ ಡಿಂಪಲ್ ಕ್ವೀನ್!

#sidideddagandu, #movie, #trailor, #realesed, #balkaninews #filmnews, #kannadasuddigalu

Tags