ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಕಿರಿಕ್ ಕೀರ್ತಿ ನಟನೆಯ ‘ಸಿಲಿಂಡರ್ ಸತೀಶ’ ಟೀಸರ್ ಬಿಡುಗಡೆ

ಇಂದು ನಟ ಕಿರಿಕ್ ಕೀರ್ತಿಯವರ ಜನುಮದಿನ. ಇವರು ಪ್ರಸ್ತುತ ಕನ್ನಡ ಚಿತ್ರರಂಗರಲ್ಲಿ ಸಕ್ರಿಯರಾಗಿದ್ದು, ಕನ್ನಡದ ಸೇವೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಹಾಗೆಯೇ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುವ ಇವರು ಕನ್ನಡ ಬಿಗ್ ಬಾಸ್4 ರ ಸ್ಪರ್ಧಿಯಾಗಿದ್ದರು.

ಅಂದ ಹಾಗೆ ಕಿರಿಕ್ ಕೀರ್ತಿ ಈಗಾಗಲೇ ‘ಎರಡನೇ ಸಲ’, ‘ದೇವ್ರಂತ ಮನುಷ್ಯ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ‘ಟೈರು’, ‘ತಿರುಮಲ ವೈನ್ ಸ್ಟೋರ್’ ಚಿತ್ರಗಳಲ್ಲಿ ನಟಿಸಿರುವ ನಟಿಸಿದ್ದು, ಈ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಹಾಗೆಯೇ ಇವರ ‘ಸಿಲಿಂಡರ್ ಸತೀಶ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕಮಾಲ್ ಮಾಡುತ್ತಿದೆ.

ಅಂದ ಹಾಗೆ ಈ ಚಿತ್ರದಲ್ಲಿ ಕಿರಿಕ್ ಕೀರ್ತಿ ಸಿಲಿಂಡರ್ ಅನ್ನು ಮನೆ ಮನೆಗೆ ತಲುಪಿಸುವ ಕೆಲಸಗಾರನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ‘ಪಾಪ ಪಾಂಡು’ ಶಾಲಿನಿ ಮತ್ತು ಸಂಗೀತಾ ನಟಿಸಿದ್ದಾರೆ.

ಈ ಟೀಸರ್ ಸಖತ್ ಆಗಿದ್ದು, ಕಿರಿಕ್ ಕೀರ್ತಿ ಅವರೇ ಹೇಳಿಕೊಂಡಂತೆ, ಇದು ಜಾಲಿ ಸ್ಟೋರಿಯಲ್ಲಾ, ನೋವಿನ ಸ್ಟೋರಿಯಂತೆ..!!! ಅಂದ ಹಾಗೆ ಈ ಚಿತ್ರವನ್ನು ಮಧುಸೂಧನ್ ಶ್ರೀಕಾರ್ ನಿರ್ದೇಶಿಸಿದ್ದಾರೆ.

3 ಮಿಲಿಯನ್ಸ್ ವೀಕ್ಷಣೆ ಪಡೆದ ‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..’ಹಾಡು

#silindarasathisha, #movie, #teaser, #released, #balkaninews #filmnews, #kannadasuddigalu, #shalini, #sangeetha

Tags