ಸುದ್ದಿಗಳು

ದೊಡ್ಡ ಅಪಾಯದಿಂದ ಪಾರಾದ ಸಿಂಪಲ್ ಸ್ಟಾರ್…!

ಕುದುರೆ ಮೇಲಿಂದ ಬಿದ್ದ ರಕ್ಷಿತ್

ರಕ್ಷಿತ್ ‘ಅವನೇ ಶ್ರೀಮನ್ನಾರಾಯಣ’  ಸಿನಿಮಾದ ದೃಶ್ಯಕ್ಕಾಗಿ ಕುದುರೆ ಏರಿದ್ದರು. ಆದರೆ ಕುದುರೆ ನೆಗೆಯವಾಗ ಕುದುರೆ ಸಮೇತ ರಕ್ಷಿತ್ ನೆಲಕ್ಕೆ ಬಿದ್ದಿದ್ದಾರೆ

ಬೆಂಗಳೂರು, ಆ.28:   ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಶೂಟಿಂಗ್ ನಡೆಯುತ್ತಿರುವ ವೇಳೆ ಅಚಾತುರ್ಯವೊಂದು ನಡೆದಿದೆ. ರಕ್ಷಿತ್, ಸಿನಿಮಾದ ದೃಶ್ಯಕ್ಕಾಗಿ ಕುದುರೆ ಏರಿದ್ದರು. ಆದರೆ ಕುದುರೆ ನೆಗೆಯವಾಗ ಕುದುರೆ ಸಮೇತ ರಕ್ಷಿತ್ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಕುದುರೆ ಜೊತೆ ಶೂಟಿಂಗ್ ಮಾಡೋದು ಅಷ್ಟು ಸುಲಭವಲ್ಲ. ಅದರೂ ರಕ್ಷಿತ್ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದು,  ಅನಿರೀಕ್ಷಿತ ಘಟನೆಯಿಂದ ಒಂದು ಕ್ಷಣ ಸೆಟ್ ನಲ್ಲಿ ಇದ್ದವರೆಲ್ಲ ಗಾಬರಿಯಾಗಿದ್ದರು. ಕೂಡಲೇ ರಕ್ಷಿತ್ ರನ್ನು ಮೇಲೆತ್ತಿದ್ದರು. ಸ್ವಲ್ಪದರಲ್ಲೇ ದೊಡ್ಡ ಅನಾಹುತದಿಂದ ರಕ್ಷಿತ್ ಪಾರಾಗಿದ್ದಾರೆ.

ಚಿತ್ರತಂಡ

‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್ ಐದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಭ್ರಷ್ಟ ಪೊಲೀಸ್ ಪಾತ್ರದಲ್ಲಿ  ರಕ್ಷಿತ್ ಅಭಿನಯಿಸುತ್ತಿದ್ದಾರೆ.   ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆಗೆ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಶ್ರೀಮನ್ನಾರಾಯಣ  ಚಿತ್ರದ ಚಿತ್ರೀಕರಣ ಬಾಗಲಕೋಟೆ, ಬಿಜಾಪುರ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ನವ ನಿರ್ದೇಶಕ ಸಚಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ಮಾಪಕ ಪ್ರಕಾಶ್ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಗೊಳ್ಳಲಿದೆ.

Tags