ಸುದ್ದಿಗಳು

ಸಿಂಧೂ ಲೋಕನಾಥ್ ದಾಂಪತ್ಯ ಜೀವನದಲ್ಲಿ ಬಿರುಕು..!?!

ಡೈವರ್ಸ್ ಕೊಡಲು ಮುಂದಾಗಿದ್ದಾರಾ ಸಿಂಧೂ..!!!

ಬೆಂಗಳೂರು.ಜ.11: ಸ್ಯಾಂಡಲ್ ವುಡ್ ನಟಿ ಸಿಂಧೂ ಲೋಕನಾಥ್ ಎರಡು ವರ್ಷಗಳ ಹಿಂದೆಯಷ್ಟೇ ತಮ್ಮ ಮನೆಯವರ ವಿರೋಧದ ನಡುವೆ ಶ್ರೇಯಸ್ ಕೊಡಿಯಾಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ದಾಂಪತ್ಯ ಜೀವನಕ್ಕೆ ವಿದಾಯ ಹೇಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಾರಣ ತಿಳಿದು ಬಂದಿಲ್ಲ

‘ಲೈಫು ಇಷ್ಟೇನೆ’, ‘ಡ್ರಾಮಾ’, ‘ಲವ್ ಇನ್ ಮಂಡ್ಯ’, ‘ಜೈ ಭಜರಂಗಬಲಿ’, ‘ಹೀಗೊಂದು ದಿನ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಸಿಂಧೂ ಲೋಕನಾಥ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಸದ್ಯ ತಮ್ಮ ಪತಿ ಶ್ರೇಯಸ್ ಕೊಡಿಯಾಲ್ ಅವರ ಮನೆಯಿಂದ ಹೊರ ಬಂದಿದ್ದು, ಬೆಂಗಳೂರಿನ ಪಿಜಿ ಒಂದರಲ್ಲಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ಡಿವೋರ್ಸ್ ನೀಡಲು ಯಾಕೆ ಮುಂದಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಕಾರಣ ತಿಳಿದು ಬಂದಿಲ್ಲ.

ಸರಳ ವಿವಾಹ

ಸಿಂಧೂ ಲೋಕನಾಥ್ ‘ಪರಿಚಯ’ ಚಿತ್ರದ ಮೂಲಕ 2009 ರಲ್ಲಿ ಸ್ಯಾಂಡಲ್ ವುಡ್ ಗೆ ಪರಿಚಯವಾಗಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೇ, ಕರಾವಳಿ ಹುಡುಗ ಶ್ರೇಯಸ್ ಕೊಡಿಯಾಲ್ ಪರಸ್ಪರ ಪ್ರೀತಿಸುತ್ತಿದ್ದರು. . ಎರಡು ವರ್ಷಗಳ ಹಿಂದಷ್ಟೇ ತಮ್ಮ ಮನೆಯವರ ವಿರೋಧವಿದ್ದರೂ ಸಹ ಕುಟುಂಬಗಳನ್ನು ಒಪ್ಪಿಸಿ 2017 ಆ.27ರಂದು ಮಡಿಕೇರಿಯಲ್ಲಿ ಸರಳ ವಿವಾಹವಾಗಿದ್ದರು.

ಮದುವೆಯಾಗಿದ್ದರೂ ಸಹ ಸಿಂಧೂ ಅವರಿಗೆ ಸಿನಿಮಾ ಅವಕಾಶಗಳೆನೂ ಕಡಿಮೆಯಾಗಿರಲಿಲ್ಲ. ಕಳೆದ ವರ್ಷ ‘ಹೀಗೊಂದು ದಿನ’ ಸಿನಿಮಾ ಹಾಗೂ ‘ಐ ಆ್ಯಮ್ 30’ ಕಿರುಚಿತ್ರಗಳು ರಿಲೀಸ್ ಆಗಿದ್ದವು. ಸದ್ಯ ಅವರು ನಟಿಸಿರುವ ‘ಕಾಣದಂತೆ ಮಾಯವಾದನು’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.

#sindhu #balkaninews #sindhulokanath #filmnews #sindhulokanath, #kannadasuddigalu

Tags