ಸುದ್ದಿಗಳು

ಚಿರು ಸರ್ಜಾ ಅಭಿನಯದ ‘ಸಿಂಗ’ ಪೋಸ್ಟರ್ ಬಿಡುಗಡೆ

ಬೆಂಗಳೂರು, ಜ.12: ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಪೋಸ್ಟರ್‌ ಗಳು ಬಿಡುಗಡೆಯಾಗಿದ್ದು,  ಚಿತ್ರದ ಮೇಲಿನ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದೆ.

ಸಿಂಗ ಪೋಸ್ಟರ್ ಹೇಗಿದೆ..?

ಹೌದು, ವಿಜಯ್ ಕಿರಣ್ ನಿರ್ದೇಶನದ, ಉದಯ್ ಮೆಹ್ತಾ ನಿರ್ಮಾಣದ ‘ಸಿಂಗ’ ಪೋಸ್ಟರ್‌ ಗಳು ಬಿಡುಗಡೆಯಾಗಿವೆ. ಟೈಟಲ್‌ ನಲ್ಲಿಯೇ ಅಭಿಮಾನಿಗಳನ್ನು ಗೆದ್ದಿದ್ದ ಈ ಸಿನಿಮಾ, ಇದೀಗ  ಪೋಸ್ಟರ್‌ಗಳು ಕೂಡ ಅಷ್ಟೆ ಮಾಸ್ ಆಗಿವೆ.

ಲವರ್ ಬಾಯ್ ಆದ ಚಿರು

‘ಸಿಂಗ’ ಸಿನಿಮಾದ ಪೋಸ್ಟರ್‌ ಗಳು ರಿಲೀಸ್ ಆಗಿದ್ದು, ಚಿರುರವರ ಸಿಂಹ ನಡಿಗೆ ಗಾಂಭೀರ್ಯತೆಯಿಂದ ಎದ್ದು ಕಾಣುತ್ತಿದೆ. ಕಟ್ಟುಮಸ್ತಾದ ದೇಹ, ಮೀಸೆ, ಬೆಂಕಿಯ ನಡುವೆ ನಡೆದು ಬರುತ್ತಿರುವ ಚಿರುವನ್ನು ನೋಡ್ತಾ ಇದ್ರೆ ಅಭಿಮಾನಿಗಳಿಗೆ ಕಿಕ್ ಕೊಡುವಂತಿದೆ. ಇನ್ನೂ ಮತ್ತೊಂದು ಪೋಸ್ಟರ್ ನಲ್ಲಿ ನಾಯಕ ನಟಿ ಕಬ್ಬು ತಿನ್ನುತ್ತಾ ಹೋಗುತ್ತಿದ್ದರೆ, ಅವರ ಹಿಂದೆ ಲವರ್ ಬಾಯ್ ಆಗಿ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.  ಚಿರುಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿದೆ ದೊಡ್ಡ ತಾರಾಗಣ

ಇನ್ನು ಈ ಸಿನಿಮಾ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಈ ಚಿತ್ರದಲ್ಲಿ ರವಿಶಂಕರ್, ತಾರಾ, ಅರುಣಾ ಬಾಲರಾಜ್, ಶಿವರಾಜ್ ಕೆ.ಆರ್.ಪೇಟೆ, ರಂಜಿತಾ, ಚಂದ್ರಪ್ರಭಾ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ಇನ್ನು ಈ ಸಿನಿಮಾಗೆ ಕಿರಣ್ ಹಂಪಾಪುರ ಛಾಯಾಗ್ರಹಣವಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ.

#singakannadamovie #sandalwood #taraanuooradha #kannadamovies #chirusarja #chirusarjaandadithiprabhudeva #balkanienws

Tags