ಸುದ್ದಿಗಳು

ಇವನ ಹೆಸರು ಸಿಂಗ, ಪ್ರೀತ್ಸೋರಿಗೆ ಭಕ್ತ ಪ್ರಹ್ಲಾದ: ಮೋಡಿ ಮಾಡುವ ‘ಸಿಂಗ’ ಟ್ರೈಲರ್

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವಾ ಇದೇ ಮೊದಲ ಬಾರಿಗೆ ನಟಿಸಿರುವ ಬಹು ನಿರೀಕ್ಷಿತ ‘ಸಿಂಗ’ ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಈ ಟ್ರೈಲರ್ ನ ಆರಂಭದಲ್ಲಿ ‘ಹೆಸರು ಸಿಂಗ, ಪ್ರೀತ್ಸೋರಿಗೆ ಭಕ್ತ ಪ್ರಹ್ಲಾದ, ಕೆಣಕಿದವರಿಗೆ ಹಿರಣ್ಯ ಕಶಪು…’ ಎಂದು ಶಿವರಾಜ್ ಕೆ.ಆರ್ ಪೇಟೆ ಹಿನ್ನೆಲೆಯಲ್ಲಿ ಧ್ವನಿ ನೀಡುವುದರೊಂದಿಗೆ ನಟನೆಯೂ ಮಾಡಿದ್ದಾರೆ.

ಹೆಸರಿಗೆ ತಕ್ಕಂತೆ ಈ ಟ್ರೈಲರ್ ಮೂಡಿ ಬಂದಿದ್ದು, ಚಿತ್ರದಲ್ಲಿ ಸಾಹಸಮಯ ದೃಶ್ಯಗಳೊಂದಿಗೆ ಕೌಟುಂಭಿಕ ಅಂಶಗಳು ಸಹ ಇರುವುದು ವಿಶೇಷವಾಗಿದೆ. ಈಗಾಗಲೇ ಈ ಚಿತ್ರದ ‘ಶ್ಯಾನೇ ಪಾಟಾಗವ್ಳೇ’ ಹಾಡು ಸಖತ್ ಹಿಟ್ ಆಗಿದೆ. ಇದೀಗ ಟ್ರೈಲರ್ ಸಹ ಮೋಡಿ ಮಾಡುತ್ತಿದೆ.

ಚಿತ್ರದ ತಾರಾಬಳದಲ್ಲಿ ಚಿರು ಸರ್ಜಾ, ಶಿವರಾಜ್ ಕೆ. ಆರ್ ಪೇಟೆ, ಹಿರಿಯ ನಟಿ ತಾರಾ, ರವಿಶಂಕರ್, ಬಿ ಸುರೇಶ್, ಕಡ್ಡಿಪುಡಿ ಚಂದ್ರು, ಅರುಣಾ ಬಾಲರಾಜ ಸೇರಿದಂತೆ ಬಹು ತಾರಾಬಳಗವಿದೆ. ಇನ್ನು ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದು, ಉಳಿದಂತೆ ಧರ್ಮ ವಿಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಗಣೇಶ್ ಮಲ್ಲಯ್ಯ ಸಂಕಲನವಿದೆ.

ಈ ಹಿಂದೆ ‘ರಾಮ್ ಲೀಲಾ’ ಸಿನಿಮಾದಲ್ಲಿ ಚಿರು, ನಿರ್ದೇಶಕ ವಿಜಯ್ ಕಿರಣ್ ಜೊತೆ ಕೆಲಸ ಮಾಡಿದ್ದರು. ನಿರ್ದೇಶಕರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಚಿತ್ರವನ್ನು ಬೆಂಗಳೂರು, ಮೈಸೂರು ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಅಂದ ಹಾಗೆ ಈ ಚಿತ್ರವು ಮುಂದಿನ ತಿಂಗಳ 14 ರಂದು ಬಿಡುಗಡೆಯಾಗುತ್ತಿದೆ.

ಪುಲ್ವಾಮ ವೀರರ ಕುಟುಂಬಕ್ಕೆ ಧನ ಸಹಾಯ ಮಾಡಿದ ಬಿಗ್ ಬಿ

#singa, #movie, #trailor, #realsed, #balkaninews #filmnews, #kannadasuddigalu, #chirusarja

Tags