ಸುದ್ದಿಗಳು

ರಾಯಚೂರಿನಲ್ಲಿ ಹನುಮಂತ

ಬೆಂಗಳೂರು, ಮಾ.15:

ಸರಿಗಮಪ ವೇದಿಕೆ ಮೇಲೆ ಬಂದ ಹನುಮಂತ ಇಂದು ದೊಡ್ಡ ಸ್ಟಾರ್ ನಟನ ಸಮನಾಗಿದ್ದಾರೆ ಅಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಯಾರ ಬೆಂಬಲವಿಲ್ಲದೆ ತಮ್ಮ ಮುಗ್ದತೆ ಹಾಗೂ ಹಾಡಿನ ಮೂಲಕವೇ ಬಾರೀ ಸದ್ದು ಮಾಡಿದ ಹನುಮಂತಪ್ಪ ಇಂದು ಎಲ್ಲರ ಮನೆಮಗನಾಗಿದ್ದಾರೆ. ಎಷ್ಟೋ ಮಂದಿ ಹಾಡಲು ಪ್ರೇರಣೆ ಹನುಮಂತ. ಈಗಾಗಲೇ ಶೋ ಮುಗಿದಿದ್ದರೂ ಕೂಡ ಹನುಮಂತನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಜಯಂತಿಯಲ್ಲಿ ಭಾಗಿಯಾದ ಹನುಮಂತಣ್ಣ

ಇದರ ಬೆನ್ನಲ್ಲೇ ಹನುಮಂತ ಇದೀಗ ರಾಯಚೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅದ್ಧೂರಿಯಾಗಿ ಅವರನ್ನು ಸ್ವಾಗತ ಮಾಡಿದರು. ರಾಯಚೂರಿನ ಮಸ್ಕಿಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಹನುಮಂತಣ್ಣನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಕೂಡ  ಆಗಮಿಸಿದ್ದರು.

ಹನುಮಂತನನ್ನು ನೋಡಿದ ಸಾವಿರಾರು ಮಂದಿ

ಇನ್ನೂ ಈ ಕಾರ್ಯಕ್ರಮದಲ್ಲಿ ಹನುಮಂತನಿಗೆ ಲಂಬಾಣಿ ಸಮಾಜದವರು ಅವರದೇ ಶೈಲಿಯ ಟೋಪಿ ಹಾಗೂ ಶಾಲು ಹಾಕಿ ಸನ್ಮಾನ ಮಾಡಿದರು. ಬಂಜಾರ್ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಹನುಮಂತನ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.

ಏಪ್ರಿಲ್ 12 ರಂದು ಮೋದಿ ಬಯೋಪಿಕ್!!

#sandalwood #sarigamapa #realityshow #balkaninews #sarigamaparealityshow #hanumanthappa

Tags