ಸುದ್ದಿಗಳು

ಸಿಂಗ ಸಿನಿಮಾ ಹೊಸ ಪೋಸ್ಟರ್

ಬೆಂಗಳೂರು,ಮಾ.4

: ನಟ ಚಿರಂಜೀವಿ ಸರ್ಜಾ ಸಿಂಗ ಆಗಿ ಬರೋದಿಕ್ಕೆ ತಯಾರಿ ನಡೆಯುತ್ತಿವೆ. ಇದೀಗ ಈ ಸಿನಿಮಾದ ಹೊಸ ಪೋಸ್ಟರ್ ಒಂದು ಬಿಡುಗಡೆಯಾಗಿದೆ.

ಚಿರಂಜೀವಿ ಸರ್ಜಾ ಸದ್ಯ ಎರಡ್ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಈ ಸಿಂಗ ಸಿನಿಮಾ ಕೂಡ ಒಂದು. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಈ ಸಿನಿಮಾ ಜೊತೆಗೆ ಈ ನಟ ಖಾಕಿ ಸಿನಿಮಾದಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಸಿನಿಮಾ ಕಥೆಯ ಬಗ್ಗೆ ಹೇಳುತ್ತಿದೆ.

Image may contain: 1 person, text

ವಿಜಯ್ ಕಿರಣ್ ನಿರ್ದೇಶನದ ಸಿನಿಮಾ 

ಹೌದು, ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ನಟನೆಯ ಸಿಂಗ ಚಿತ್ರ ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ಸಿನಿಮಾದ ರೋಮ್ಯಾಂಟಿಕ್ ಸನ್ನಿವೇಶಗಳು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಒಂದು ಹಂತಕ್ಕೆ ಮುಗಿದಿದೆ. ವಿಜಯ್ ಕಿರಣ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಉದಯ್ ಮೆಹ್ತಾ ಸಿನಿಮಾ ನಿರ್ಮಾಪಕರಾಗಿದ್ದಾರೆ, ರಾಮ್ ಲೀಲಾ ನಂತರ, ನಿರ್ದೇಶಕರು ಮತ್ತು ನಟ ಚಿರಂಜೀವಿ ಮತ್ತೆ ಒಂದಾಗಿದ್ದಾರೆ..

ಖಡಕ್ ಲುಕ್ ಪೋಸ್ಟರ್

ಇದೀಗ ಈ ಸಿನಿಮಾದ ಪೋಸ್ಟರ್ ಒಂದು ಸದ್ದು ಮಾಡುತ್ತಿದೆ. ಈ ಪೋಸ್ಟರ್ ನಲ್ಲಿ ಚಿರು ಒಂದು ಆಯುಧವನ್ನು ಕೈಯಲ್ಲಿ ಇಟ್ಟುಕೊಂಡು ಸಿಟ್ಟಿನಿಂದ ನೋಡುತ್ತಿರುವ ಪೋಸ್ಟರ್ ಇದಾಗಿದೆ. ಶತ್ರುಗಳನ್ನು ಹೊಡೆದಿರುವ ನೋಟ ಇದಾಗಿದ್ದು, ಸಿನಿಮಾದಲ್ಲಿನ ಫೈಟ್ ಒಂದನ್ನು ಹೇಳಿಕೊಡುವಂತಿದೆ. ಇನ್ನು ಈ ಸಿನಿಮಾದಗೆ ನಿಮ್ಮ ಪ್ರೀತಿ, ಸಪೋರ್ಟ್ ಬೇಕು ಅಂತಾ ನಟ ಚಿರು ಇನ್ಸ್ಟಾಗ್ಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಖಡಕ್ ಲುಕ್ ನಲ್ಲಿ ಕಾಣಿಸುತ್ತಿರುವ ಚಿರು ಪೋಸ್ಟರ್ ಸಿನಿಮಾದಲ್ಲಿನ ಕಥೆ ಹೇಳೋದಂತೂ ಸತ್ಯ..

ರಣ್ ಬೀರ್ ಜೊತೆಗೆ ದೀಪಿಕಾ ತೆರೆ ಹಂಚಿಕೊಂಡರೆ, ರಣ್ ವೀರ್ ಪ್ರತಿಕ್ರಿಯೆ ಏನು ಗೊತ್ತೆ…?

Tags