ಸುದ್ದಿಗಳು

ಇದೇ ಜ.11ಕ್ಕೆ ‘ಸಿಂಗ’ ಚಿತ್ರದ ಫಸ್ಟ್ ಲುಕ್!!

ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಈ ಚಿತ್ರದ ನಾಯಕ ನಾಯಕಿ..

ಬೆಂಗಳೂರು,ಜ.9: ಅಮ್ಮಾ ಐ ಲವ್ ಯೂ’ ಚಿತ್ರದ ನಂತರ ಚಿರಂಜೀವಿ ಸರ್ಜಾ ನಟಿಸುತ್ತಿರುವ ‘ಸಿಂಗ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.ಇದೊಂದು ಪಕ್ಕಾ ಮಾಸ್ ಚಿತ್ರವಾಗಿದ್ದು, ‘ರಾಮ್ ಲೀಲಾ’’ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನ ಮಾಡುತ್ತಿದ್ದು, ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ.
ಇನ್ನು ಈ ಚಿತ್ರದ ಫಸ್ಟ್ ಲುಕ್ ಇದೇ ತಿಂಗಳ 11 ರಂದು ಬಿಡುಗಡೆಯಾಗಲಿದೆ.. ಬಹಳ ಖುಷಿಯಾಗುತ್ತಿದೆ.. ಎಲ್ಲರೂ ಸಹಕರಿಸಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಚಿರು ಸರ್ಜಾ..

ತಾರಾಗಣ

ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಈ ಚಿತ್ರದ ನಾಯಕ ನಾಯಕಿ..ಚಿತ್ರದಲ್ಲಿ, ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಸೇರದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ನಿರ್ದೇಶನ, ಕೆ.ರವಿವರ್ಮ, ಪಳನಿರಾಜ್ ಸಾಹಸ, ಗಣೇಶ್ ಸಂಕಲನವಿದೆ.

 

Tags