ಸುದ್ದಿಗಳು

ಕನ್ನಡದ ‘ಸಿಂಗ’ ತಮಿಳಿನ ‘ಕುಟ್ಟಿ ಪುಲಿ’ ರಿಮೇಕ್ !?!

ಇಂದು ಬಿಡುಗಡೆಯಾದ ಹಾಡಿನ ಮೂಲಕ ಗಮನ ಸೆಳೆದ ಸಿನಿಮಾ

ಬೆಂಗಳೂರು.ಮಾ.21: ಚಂದನವನದ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಅಭಿನಯದ ವಿಭಿನ್ನ ಸಿನಿಮಾ ‘ಸಿಂಗ’. ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ತಮಿಳಿನ ‘ಕುಟ್ಟಿ ಪುಲಿ’ ರಿಮೇಕ್ ಎಂದು ಹೇಳಲಾಗುತ್ತಿದೆ.

ವಿಶೇಷವೆಂದರೆ, ಈ ಸಿನಿಮಾ ತಿಂಗಳುಗಳ ಹಿಂದಷ್ಟೇ ಆರಂಭವಾಗಿತ್ತು. ಈಗಾಗಲೇ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೂ ಸಹ ಸಿದ್ದವಾಗುತ್ತಿದೆ. ಅಂದ ಹಾಗೆ ಇದು 2013ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ‘ಕುಟ್ಟಿಪುಲಿ’ ಸಿನಿಮಾದ ರಿಮೇಕ್ ಆಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ.

‘ಕುಟ್ಟಿ ಪುಲಿ’ ಚಿತ್ರವನ್ನು ಎಂ. ಮುತ್ತಯ್ಯ ಮತ್ತು ಭೂಪತಿ ಪಾಂಡ್ಯನ್ ಸೇರಿ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಸಸಿಕುಮಾರ್ ಹೀರೋ ಆಗಿ ನಟಿಸಿದ್ದರು. ಥ್ರಿಲ್ಲರ್ ಜೊತೆಗೆ ಆ್ಯಕ್ಷನ್ ಜಾನರಿನ ಈ ಸಿನಿಮಾ ಒಂದು ಮಟ್ಟಕ್ಕೆ ಹೆಸರು ಮಾಡಿತ್ತು.

ಈಗ ಉದಯ್ ಮೆಹ್ತಾ ನಿರ್ಮಿಸುತ್ತಿರುವ ‘ಸಿಂಗ’ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ರಾಮ್ ಲೀಲಾ’ ಸಿನಿಮಾದಲ್ಲಿ ಚಿರು ಇದೇ ವಿಜಯ್ ಕಿರಣ್ ಜೊತೆ ಕೆಲಸ ಮಾಡಿದ್ದರು. ನಿರ್ದೇಶಕರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.

ಇಂದು ‘ಊರ ಸುತ್ತಿದರೂ ಇವಳೇ ಚಂದ, ಶ್ಯಾನೆ ಟಾಪಾಗೋವ್ಳೆ’ ಎನ್ನುವ ಲಿರಿಕಲ್ ಹಾಡು ರಿಲೀಸ್ ಆಗಿದ್ದು, ಉತ್ತಮವಾಗಿ ಮೂಡಿ ಬಂದಿದೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ಇನ್ನು ಈ ಚಿತ್ರವನ್ನು ಬೆಂಗಳೂರು, ಮೈಸೂರು ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಗಣೇಶ್ ಸಂಕಲನ, ಧರ್ಮವಿಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

2020 ರ ಬೇಸಿಗೆಗೆ ಬರಲಿದ್ದಾನೆ ‘ರಾಬರ್ಟ್’ !!

#singha, #remakeoftamilmovie, #balkaninews #filmnews, #kannadasuddigalu, #chirusarja, #adithiprabhudeva

Tags