ಸುದ್ದಿಗಳು

‘ಸಿಂಗ’ ಟೀಸರ್ ಗೆ ಸಾಥ್ ನೀಡಲಿರುವ ಚಾಲೆಂಜಿಂಗ್ ಸ್ಟಾರ್!!

ಬೆಂಗಳೂರು,ಮಾ.13:

ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ‘ಸಿಂಗ’ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಚಿತ್ರದ ಶೂಟಿಂಗ್ ಮಲೆಶಿಯಾದಲ್ಲಿ ನಡೆಯುತ್ತಿದ್ದು, ಸದ್ಯ ಹಾಡಿನ ಚಿತ್ರೀಕರಣದಲ್ಲಿ ಚಿತ್ರತಂಡ ನಿರತವಾಗಿದೆ.

ಪಕ್ಕಾ ಮಾಸ್ ಚಿತ್ರ

‘ಸಿಂಗ’.. ಹೆಸರಿಗೆ ತಕ್ಕಂತೆ ಇದೊಂದು ಪಕ್ಕಾ ಮಾಸ್ ಚಿತ್ರವಾಗಿದ್ದು, ಚಿರು ಸರ್ಜಾ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅದಿತಿ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದು, ‘ರಾಮ್ ಲೀಲಾ’ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನವಿದೆ…

ಮಾ.15 ರಂದು ‘ಸಿಂಗ’ ಟೀಸರ್

ಇದೇ ಮಾ.15 ರಂದು ‘ಸಿಂಗ’ ಟೀಸರ್ ನನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.. ಚಿರು ಸರ್ಜಾ ಹಾಗೂ ದರ್ಶನ್ ಗೆ ತುಂಬಾ ಆತ್ಮೀಯತೆ       ಇರುವುದರಿಂದ ದರ್ಶನ್ ‘ಸಿಂಗ’ ಟೀಸರ್ ನನ್ನು ಬಿಡುಗಡೆ ಮಾಡಲಿದ್ದಾರೆ..

ಖಳನಾಯಕರಾಗಿ ರವಿಶಂಕರ್

ಇನ್ನು ಚಿತ್ರಕ್ಕೆ ಖಳನಾಯಕರಾಗಿ ರವಿಶಂಕರ್ ಕೈ ಜೋಡಿಸಿದ್ದು, ಈ ಹಿಂದೆ ಚಿರು ಹಾಗೂ ರವಿಶಂಕರ್ ಜೋಡಿಯಲ್ಲಿ ‘ವರದನಾಯಕ’ ಸೇರಿದಂತೆ ಅನೇಕ ಚಿತ್ರಗಳು ಮೂಡಿ ಬಂದಿದ್ದವು. ಉಳಿದಂತೆ ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ನಿರ್ದೇಶನ, ಕೆ.ರವಿವರ್ಮ, ಪಳನಿರಾಜ್ ಸಾಹಸ, ಗಣೇಶ್ ಸಂಕಲನವಿದೆ.

 

View this post on Instagram

 

Thank u soo much @darshanthoogudeepashrinivas teaser on 15/3/2019 pls watch and give ur feedback guys…

A post shared by Chirranjeevi Sarja (@chirusarja) on

ನೈಸರ್ಗಿಕ ಮಾಯ್ಚಿರೈಸರ್ ತೆಂಗಿನೆಣ್ಣೆ

Tags