ಸುದ್ದಿಗಳು

‘ನಿಮ್ಮಿಬ್ಬರದ್ದೂ ಸೂಪರ್ ಜೋಡಿ, ಮದ್ವೆ ಆಗಿ ಬಿಡಿ’ ಎಂದ ಫ್ಯಾನ್ಸ್

ನಟ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ಕಳೆದ ಮೂರು ವರ್ಷಗಳಿಂದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಇದೇ ತಿಂಗಳ ಕೊನೆಯ ವಾರ ತೆರೆಗೆ ಬರುತ್ತಿದೆ. ಹೀಗಿರುವಾಗಲೇ ಈ ಜೋಡಿ ನಡುವೆ ಈಗ ಏನೋ ನಡೆಯುತ್ತಾ ಇದೆಯಂತೆ. ಹೀಗೆಂದು ಹೇಳುತ್ತಿರುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳು.

ಅಂದ ಹಾಗೆ ನಿನ್ನೆ (ಡಿ.08) ನಟಿ ಶಾನ್ವಿ ಶ್ರೀವಾತ್ಸವ್ ಬರ್ತಡೇ ಇತ್ತು. ಹೀಗಾಗಿ ಅಭಿಮಾನಗಳು ಸೇರಿದಂತೆ ಚಿತ್ರರಂಗದವರು ಸಹ ಶುಭ ಹಾರೈಸಿದ್ದರು. ಹಾಗೆಯೇ ‘ಅವನೇ…’ ಚಿತ್ರತಂಡದವರು ಸಹ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು.

ಹಾಗೆಯೇ ರಕ್ಷಿತ್ ಶೆಟ್ಟಿ ಸಹ ಕೆಲವೊಂದು ಫೋಟೋಗಳನ್ನು ಹಂಚಿಕೊಂಡು ‘ಸದಾ ನಗುವ ಕ್ಯೂಟ್ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತ ಈ ದೇವತೆಯನ್ನು ನೋಡುತ್ತಿದ್ದರೆ ನನಗೆ ಯಾವಾಗಲೂ ಆಶ್ಚರ್ಯ ಆಗುತ್ತೆ. ಮುಂದೊಂದು ದಿನ ಈ ದೇವತೆ ಎತ್ತರಕ್ಕೆ ಹಾರಬಹುದು ಅಂತ ಯೋಚಿಸುತ್ತೇನೆ. ಸುಂದರ ಆತ್ಮವಿರುವ ಚೇತನ ನೀವಾಗಿದ್ದು, ಎಂದೆಂದೂ ನಿಮ್ಮ ಜೀವನ ಹೀಗೇ ಇರಲಿ ಎಂದು ಹಾರೈಸುತ್ತೇನೆ ಲಕ್ಷ್ಮಿಯವರೇ’ ಎಂದು ಟ್ವೀಟ್ ಮಾಡಿದ್ದಾರೆ.

ಇದೀಗ ಇವರಿಬ್ಬರ ಫೋಟೋ ನೋಡಿ, ಅದರಲ್ಲಿಯೂ ರಕ್ಷಿತ್ ಬರಹ ನೋಡಿ, ಅನೇಕರು ಓಹೋ.. ಏನೋ ನಡೀತಾ ಇದೆ.. ಸೂಪರ್ ಜೋಡಿ, ಮದುವೆ ಆಗಿ ಎಂದು ಹೇಳುತ್ತಿದ್ದಾರೆ. ಒಬ್ಬರಲ್ಲ… ಇಬ್ಬರಲ್ಲ… ಅನೇಕರು ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇವರಿಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

‘ಬಿ ಹೈಂಡ್ ವುಡ್ಸ್ ಗೋಲ್ಡ್’ ಮೆಡಲ್ ಪ್ರಶಸ್ತಿ ಪಡೆದ ಕಿರಿಕ್ ಬೆಡಗಿ

#AvaneSrimannarayana#RakshitShetty #ShanviSrivastava #ShanviSrivastava #ShanviSrivastavaBirthday

Tags