ಸುದ್ದಿಗಳು

ನಾನು ಡೇಟಿಂಗ್ ಮಾಡುತ್ತಿಲ್ಲ: ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ ಸೋನಾಲ್ ಚೌಹಾಣ್

ಭಾರತದ ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಅದೆಲ್ಲ ಸುಳ್ಳು ಎಂದು ಬಾಲಿವುಡ್ ನಟಿ ಸೋನಾಲ್ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಹುಲ್ ಹಾಗೂ ಸೋನಾಲ್ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಕುರಿತು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿರುವ ಸೋನಾಲ್, ಮಾಧ್ಯಮ ವರದಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಒಬ್ಬ ಪ್ರತಿಭಾನ್ವಿತ ಆಟಗಾರ. ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಸಂಪೂರ್ಣ ಮಾಹಿತಿ ಬೇಕಾದರೆ ಕೇಳಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ನಟಿ ನಿಧಿ ಅಗರ್ವಾಲ್ ಅವರೊಂದಿಗೆ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವರದಿಗಳನ್ನು ಕೆಎಲ್ ರಾಹುಲ್ ಮತ್ತು ನಿಧಿ ಇಬ್ಬರು ನಿರಾಕರಿಸಿದ್ದರು.

ಸದ್ಯ ರಾಹುಲ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಟೂರ್ನಿಗೆ ಹೆಚ್ಚುವರಿ ಆರಂಭಿಕ ಸ್ಥಾನದಲ್ಲಿ ಆಯ್ಕೆ ಆಗಿದ್ದ ರಾಹುಲ್ ಗೆ ಆಯ್ಕೆ ಸಮಿತಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅಭ್ಯಾಸ ಪಂದ್ಯದಲ್ಲಿ ಅವಕಾಶ ನೀಡಿದ್ದರು. ರಾಹುಲ್ ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.

’50 ಷೇಡ್ಸ್ ಆಫ್ ಗ್ರೇ’: ಬಾಲಿವುಡ್ ನಟಿ ಸೊನಾಲ್ ಚೌಹಾಣ್!

#balkaninews #sonal chauhan #dating #sonal chauhanfacebook #sonal chauhantwitter

Tags