ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಪ್ರಥಮ ಚುಂಬನದ ಬಗ್ಗೆ ಹೇಳಿಕೊಂಡ ‘ಶೃಂಗಾರದ ಹೂವು’ ಸೋನಲ್ ಮೊಂಥೆರೋ..!!!

ಬಾಲ್ಕನಿ ನ್ಯೂಸ್ ಕನ್ನಡ ಪ್ರಸ್ತುತ ಪಡಿಸುವ ‘ನಾಟಿ ಟಾಕ್ಸ್ ವಿಥ್ ಅಭಿ’ (Naughty talks with Abhi) ಕಾರ್ಯಕ್ರಮದಲ್ಲಿ ‘ಪಂಚತಂತ್ರ’ ಬೆಡಗಿ ಸೋನಲ್ ಮೊಂಥೆರೋ ತಮ್ಮ ಪ್ರಥಮ ಚುಂಬನದ ಬಗ್ಗೆ ಹೇಳಿಕೊಂಡಿದ್ದಾರೆ.

ಇದಷ್ಟೇ ಅಲ್ಲದೇ ಸೋನಲ್, ತಮ್ಮ ಪ್ರೀತಿ, ಪ್ರೇಮ, ಜೀವನ ಹಾಗೂ ಸಿನಿಮಾ ಪಯಣದ ಕುರಿತಂತೆ ನಮ್ಮೊಡನೇ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಸೋನಲ್ ಮೊಂಥೆರೋ ಪ್ರಾರಂಭದಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಿ, ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಇವರು ‘ಮದುವೆ ದಿಬ್ಬಣ’, ‘ಎಂ.ಎಲ್.ಎ’, ‘ಅಭಿಸಾರಿಕೆ’ ಮತ್ತು ‘ಪಂಚತಂತ್ರ’ ನಟಿಸಿ ಜನಪ್ರಿಯರಾಗಿದ್ದಾರೆ.

ಸದ್ಯ ಸೋನಲ್ ರಿಗೆ ಅವಕಾಶಗಳ ಸುರಿಮಳೆಯಾಗುತ್ತಿದ್ದು, ಇದೀಗ ‘ತಲ್ವಾರ್ ಪೇಟೆ’, ‘ಬುದ್ದಿವಂತ-2’, ‘ಗಾಳಿಪಟ-2’ ಹಾಗೂ ‘ಡೆಮೋ ಪೀಸ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ಬಾಲಿವುಡ್ ನಲ್ಲಿಯೂ ಅವಕಾಶಗಳು ದೊರೆತಿವೆ.

#SonalMonteiro, #Kannada #Actress, #Secrets #Revealed, #balkaninews #filmnews, #kannadasuddigalu

Tags