ಸುದ್ದಿಗಳು

‘ಡೆಮೋ ಪೀಸ್’ ನಲ್ಲಿ ಸೋನಲ್ ಮೊಂತೆರೋ

ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ಮಂಗಳೂರ ಬೆಡಗಿ

ಬೆಂಗಳೂರು.ಮೇ.24: ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರದ ಮೂಲಕ ಗುರುತಿಸಿಕೊಂಡ ನಟಿ ಸೋನಲ್ ಮೊಂತೆರೋ. ಇದೀಗ ಭಟ್ಟರ ‘ಗಾಳಿಪಟ-2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಕೋಸ್ಟಲ್ ವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಸೋನಲ್ ಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆಯಿತು. ‘ಎಂ.ಎಲ್.ಎ’, ‘ಅಭಿಸಾರಿಕೆ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಇವರೀಗ ಉಪೇಂದ್ರರ ‘ಬುದ್ದಿವಂತ-2’ ಚಿತ್ರಕ್ಕೂ ನಾಯಕಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಚಿತ್ರವನ್ನೂ ಸಹ ಒಪ್ಪಿಕೊಂಡಿದ್ದಾರೆ.

Image result for sonal monteiro

ಹೌದು, ಸೋನಲ್ ಇದೀಗ ‘ಡೆಮೊ ಪೀಸ್’ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರವನ್ನು ‘ಸ್ಪರ್ಶ’ ರೇಖಾ ನಿರ್ಮಿಸುತ್ತಿದ್ದು, ವಿವೇಕ್ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿಯ ಭರತ್ ಬೋಪಣ್ಣ ನಾಯಕನಟರಾಗಿದ್ದು, ಸೋನಲ್ ನಾಯಕಿಯಾಗಿದ್ದಾರೆ. ‘ನಾನು ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದು, ನಿರ್ದೇಶಕರು ಉತ್ತಮವಾಗಿ ಕಥೆ ಮಾಡಿದ್ದಾರೆ. ಪ್ರೇಮಮಯ ಕಥೆಯೊಂದಿಗೆ ಕೌಟುಂಭಿಕ ಕಥೆಯೂ ಇದೆ’ ಎನ್ನುತ್ತಾರೆ ಸೋನಲ್.

ಅಭಿಮಾನಿಗಳಿಗೆ ಸಲ್ಲು ಕೊಟ್ರು ‘ಸ್ಲೋಮೋಶನ್ ಚಾಲೆಂಜ್’

#sonalmonthero, #acted, #demopiece, #movie, #balkaninews #filmnews, #sparsharekha, #kannadasuddigalu

Tags