ಸುದ್ದಿಗಳು

ಕ್ಯಾನ್ಸರ್ ನಿಂದ ಗುಣಮುಖರಾಗುತ್ತಿರುವ ಸೋನಾಲಿ ಬೇಂದ್ರೆಯವರ ಹೊಸ ಚಿಕಿತ್ಸೆ ಇದುವೇ ನೋಡಿ…

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಸದ್ಯ ಕ್ಯಾನ್ಸರ್‌ ಗೆ ತುತ್ತಾಗಿ ಅಲ್ಲಿಂದ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ. ಸದ್ಯ ಈ ನಟಿ ಕೆಲವೊಂದು ಚಿಕಿತ್ಸೆ ಕೂಡ ಮುಂದುವರೆಸಿದ್ದಾರೆ. ಇದರ ಭಾಗವಾಗಿ ಆಕ್ವಾ ಥೆರಪಿ ಕೂಡ  ಮಾಡಬೇಕಾಗುತ್ತಿದೆ. ಇದೀಗ ಈ ನಟಿ ಆಕ್ವಾ ಥೆರಪಿ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

 ಸೋನಾಲಿಯ ಹೊಸ ಚಿಕಿತ್ಸೆ

ಹೌದು, ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಚಾರವನ್ನು ಅಭಿಮಾನಿಗಳ ಮುಂದಿಟ್ಟಿದ್ದರು. ನಿಜಕ್ಕೂ ಕೋಟ್ಯಾಂತರ ಅಭಿಮಾನಿಗಳು ಈ ವಿಚಾರಕ್ಕೆ ಶಾಕ್ ಆಗಿದ್ದರು. ಇದೀಗ ಈ ಎಲ್ಲಾ ಅಭಿಮಾನಿಗಳ ಆಶೀರ್ವಾದದಿಂದ ಈ ನಟಿ ಚೇತರಿಕೆ ಕಂಡಿದ್ದಾರೆ. ಆದರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯ ಈ ನಟಿ ಆಕ್ವಾ ಥೆರಪಿಯನ್ನು ಮಾಡಿಸಿಕೊಂಡಿದ್ದು ಅದರ ವಿಡಿಯೋ ಹಂಚಿಕೊಂಡಿದ್ದಾರೆ.

ವ್ಯಾಯಾಮದ ವಿಡಿಯೋ ಹಂಚಿಕೊಂಡ ನಟಿ

ಇದೊಂದು ವ್ಯಾಯಾಮವಾಗಿದೆ. ನೀರಿನಲ್ಲಿ ಮಾಡುವ ವ್ಯಾಯಾಮ ಈ ವಿಡಿಯೋ ಜೊತೆಗೆ ಒಂದಿಷ್ಟು ಮಾತುಗಳನ್ನು ಆಡಿದ್ದಾರೆ ಈ ನಟಿ. ಈ ಆಕ್ವಾ ಥೆರಪಿ ಮಾಡುವುದು ಕಠಿಣದ ಕೆಲಸ. ಆದರೆ ಸಾಮಾನ್ಯ ಸ್ಥಿತಿಯಲ್ಲಿದ್ದ ಮಾಡಿದರೆ ಸುಲಭ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಬಹಳಷ್ಟು ಕಮೆಂಟ್‌ ಗಳು ಬಂದಿವೆ. ಅಷ್ಟೇ ಅಲ್ಲ ಸೋನಾಲಿಯ ಈ ಬದುಕಿನ ಹೋರಾಟಕ್ಕೆ ಹಲವಾರು ಮಂದಿ ಉತ್ಸಾಹ ತುಂಬಿದ್ದಾರೆ.

Image result for sonali bendre aqua therapy session

‘ಭೀಷ್ಮ’ ನ ಪೂಜಾ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ!!

#balkaninews #cancertreament #aquatherapy #sonalibendre #sonalibendremovies

Tags