ಉದಯೋನ್ಮುಖರುಬಾಲ್ಕನಿಯಿಂದಸುದ್ದಿಗಳು

ಶೃಂಗಾರದ ಹೂವು ಸೋನಲ್ ಮೊಂಥೆರೋ

ತುಳು ಮತ್ತು ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ನಟಿ

ಬೆಂಗಳೂರು.ಏ.04: ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಗಮನ ಸೆಳೆಯುತ್ತಿದ್ದು, ನಾಯಕಿಯಾಗಿ ನಟಿಸಿರುವ ಸೋನಲ್ ಮೋಂಥೆರೋ ‘ಈ ಸಿನಿಮಾ ನನಗೊಂದು ಬ್ರೇಕ್ ನೀಡಿದೆ’ ಎಂದಿದ್ದಾರೆ.

ಹೌದು, ‘ಪಂಚತಂತ್ರ’ ಚಿತ್ರವು ಸೋನಲ್ ರಿಗೊಂದು ಬಿಗ್ ಬ್ರೇಕ್ ನೀಡಿದ್ದು, ಅವರಿಗೀಗ ಬಾಲಿವುಡ್ ನಿಂದಲೂ ಆಫರ್ ಗಳು ಬರುತ್ತಿವೆ. ಹಾಗಂತಾ ಈ ಚಿತ್ರವು ಅವರ ಮೊದಲ ಸಿನಿಮಾವಲ್ಲಾ, ತುಳು ಚಿತ್ರರಂಗದಿಂದ ಸಿನಿಮಾ ಪಯಣ ಆರಂಭಿಸಿದ ಸೋನಲ್ ಈಗಾಗಲೇ ಪ್ರಥಮ್ ಜೊತೆಗೆ ‘ಎಂ.ಎಲ್.ಎ’, ‘ಅಭಿಸಾರಿಕೆ’ ಮತ್ತು ‘ಮದುವೆ ದಿಬ್ಬಣ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ‘ಪಂಚತಂತ್ರ’ ಚಿತ್ರದಲ್ಲಿ ಸೋನಲ್ ಗ್ಲಾಮರಸ್ ಆಗಿ ನಟಿಸಿದ್ದ ಕುರಿತು ಅವರೇ ಹೀಗೆ ಹೇಳುತ್ತಾರೆ. ‘ಈ ಮೊದಲಿಗೆ ನನಗೆ ಮುಗ್ಧ ಹುಡುಗಿಯ ಪಾತ್ರಗಳೇ ಸಾಕು ಅನಿಸುತ್ತಿತ್ತು ಹಾಗೆಯೇ ನನ್ನ ಮನೆಯವರು ಸಹ ಹೇಳುತ್ತಿದ್ದರು. ಅದೇ ನನ್ನ ತಲೆಯಲ್ಲೇ ಉಳಿದು ಒಂದಷ್ಟು ಸಿನಿಮಾಗಳಲ್ಲಿ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚಿದೆ. ಆದರೆ ನಟಿಯಾಗಿ ನಾನ್ಯಾಕೆ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಅಂತ ಯೋಚಿಸುತ್ತಿರುವಾಗ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇನ್ನು ಈ ಸಿನಿಮಾ ನನ್ನ ಸಿನಿಮಾ ಬದುಕಿಗೆ ದೊಡ್ಡ ಟರ್ನಿಂಗ್ ಪಾಯಿಂಟ್, ಜನರಿಗೆ ರೀಚ್ ಆಗಿದ್ದೇನೆ. ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ’

11 ಆಗಸ್ಟ್ 1996 ಮಂಗಳೂರಿನಲ್ಲಿ ಜನಿಸಿದ ಸೋನಲ್ 2014 ರಲ್ಲಿ ತುಳುಭಾಷೆಯ ‘ಎಕ್ಕ ಸಕ್ಕ’ ಚಿತ್ರದಿಂದ ಸಿನಿಮಾ ಪಯಣ ಪ್ರಾರಂಭಿಸಿದರು. ಈ ಚಿತ್ರವನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿತ್ತು. ನಂತರ 2016 ರಲ್ಲಿ ‘ಜೈ ತುಳುನಾಡು’, ‘ಪಿಲಿಬೈಲ್ ಯಮನಕ್ಕಾ’, ಚಿತ್ರಗಳಲ್ಲಿ ನಟಿಸಿದರು. ಇನ್ನು 2018 ರ ವೇಳೆಗೆ ಕೋಸ್ಟಲ್ ವುಡ್ ನ ಬಹು ಬೇಡಿಕೆಯ ನಾಯಕನಟಿಯಾಗಿರುವುದು ಅವರ ಪ್ರತಿಭೆಯೇ ಕಾರಣ. ನಂತರ ಸ್ಯಾಂಡಲ್ ವುಡ್ ಗೂ ಬಂದು ಇಲ್ಲಿಯೂ ನೆಲೆ ನಿಂತಿದ್ದಾರೆ.

ಮಂಗಳೂರಿನ ವಿನ್ಸೆಂಟ್ ಮೊಂಥೆರೋ ಹಾಗೂ ಲಿತಾ ಮೊಂಥೆರೋ ಅವರ ಮಗಳಾಗಿರುವ ಸೋನಲ್ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಭಿನಯದ ಕುರಿತಂತೆ ಆಸಕ್ತಿ ಇಲ್ಲದಿದ್ದರೂ ತಾಯಿಯ ಒತ್ತಾಯಕ್ಕೆ ಮಣಿದು ಸಿನಿಮಾಗಳಲ್ಲಿ ತೊಡಗಿಕೊಂಡರು. ಮೊದಲ ಚಿತ್ರದ ಯಶಸ್ಸು ಅವರನ್ನು ಇಲ್ಲಿಯವರೆಗೂ ಕರೆದು ತಂದಿದೆ.

ಸೋನಲ್ ರಿಗೆ ಇಬ್ಬರು (ಶರಲ್ ಮತ್ತು ಶರಾನ್) ಸಹೋದರಿಯರಿದ್ದು, ಇವರು ಮಾತ್ರ ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಹೋದರಿಯರು ಅಬ್ರಾಡ್ ನಲ್ಲಿ ಕೆಲಸದಲ್ಲಿದ್ದಾರೆ.

ಸದ್ಯ ಯೋಗರಾಜ್ ಭಟ್ ರೊಂದಿಗೆ ‘ಗಾಳಿಪಟ-2’, ‘ತಲ್ವಾರ್ ಪೇಟೆ’ ಹಾಗೂ ಬಾಲಿವುಡ್ ನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇವರ ಸಿನಿಮಾ ಜೀವನ ಹೀಗೆಯೇ ನಿರಂತರವಾಗಿ, ಸುಖಮಯವಾಗಿ ಸಾಗುತ್ತಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಟ್ರೈಲರ್ ನಿಂದ ಕುತೂಹಲ ಮೂಡಿಸಿರುವ ‘ಪಯಣಿಗರು’

#sonalmonthero, #cinimalife, #balkaninews #filmnews, #kannadasuddigalu, #yekkasakka, #MLA, #panchatantra,

Tags