ಸುದ್ದಿಗಳು

ಹೆಸರು ಬದಲಾಯಿಸಿಕೊಂಡಿದ್ದಕ್ಕೆ ಸೋನಂ ಕಾಳೆಲೆದ ಟ್ರೋಲಿಗರು….!

ಸೋನಂಕಪೂರ್ ಮಹಿಳಾವಾದಿ. ಎಲ್ಲೆಡೆಯೂ ಸಮಾನ ಅವಕಾಶ ಸಿಗಬೇಕು ಎಂಬುದು ಅವರ ಬೇಡಿಕೆ. ಇತ್ತೀಚೆಗೆ ಸೋನಂಕಪೂರ್ ಅನಂದ್ ಅಹುಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಸಾಮಾನ್ಯವಾಗಿ ಮಹಿಳೆಯರು ತಮ್ಮ ಹೆಸರಿನ ಕೊನೆಯಲ್ಲಿ ಪತಿಯ ಹೆಸರನ್ನು ಅಥವಾ ಕಿರುನಾಮವನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ. ಆದರೆ ಸೋನಂಕಪೂರ್ ಈ ರೀತಿ ಮಾಡಿರಲಿಲ್ಲ. ಬದಲಿಗೆ ಅನಂದ್ ಅಹುಜಾ ತನ್ನ ಹೆಸರಿಗೆ ಎಸ್ ಎಂದು ಸೇರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.

ತಾವೊಬ್ಬ ಪೆಮಿನಿಸ್ಟ್

ಇದೀಗ ಸೋನಂ ಕಪೂರ್ ತಮ್ಮ ಹೆಸರನ್ನು ಸೋನಂ ಕಪೂರ್ ಅಹುಜಾ ಎಂದು ಬದಲಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಕ್ಯಾನೆಸ್ ಫಿಲಂ ಫೆಸ್ಟಿವಲ್ ನಲ್ಲಿ ಕಾಸ್ಮೆಟಿಕ್ ಬ್ರಾಂಡ್ ಎಲ್ ಓರಿಯಲ್ ಪ್ಯಾರೀಸ್ ನ ಬ್ರಾಂಡ್ ಅಂಬಾಸಿಡರ್ ಆಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದ ಸೋನಂ ತಾವೊಬ್ಬ ಫೆಮಿನಿಸ್ಟ್ ಎಂದಿದ್ದರು.ಇಬ್ಬರಿಗೂ ಸಮಾನ ಗೌರವ ನೀಡುತ್ತಿದ್ದೇನೆ

ಆದರೆ ಇದೀಗ ಹೆಸರು ಬದಲಾಯಿಸಿಕೊಂಡಿದಕ್ಕೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೆ ಉತ್ತರ ನೀಡಿರುವ ಸೋನಂ, ಹೆಸರು ಬದಲಾಯಿಸುವಂತೆ ಯಾರೊಬ್ಬರು ನನಗೆ ಸೂಚಿಸಿಲ್ಲ. ಇದು ನನ್ನ ವೈಯಕ್ತಿಕ ಆಯ್ಕೆ. ಮಹಿಳಾವಾದ ಎಂದರೆ ನನಗೆ ಏನೂ ಬೇಕು ಅದನ್ನು ಮಾಡುವುದು ಹೊರತು ಬೇರೆಯವರಿಗೆ ಏನೂ ಬೇಕು ಎಂಬುದನ್ನು ಅಲ್ಲಾ ಎಂದಿದ್ದಾರೆ. ಕಪೂರ್ ಎಂಬುದು ನನ್ನ ಕುಟುಂಬದ ಹೆಸರು ಮತ್ತು ಅಹುಜಾ ಕೂಡ ಕುಟುಂಬವೊಂದರ ಹೆಸರು ನಾನು ಈಗ ಆ ಕುಟುಂಬದ ಸೊಸೆ. ಎರಡು ಕುಟುಂಬದ ಹೆಸರನ್ನು ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ.ಹೆಸರಿನ ಹಿಂದೆ ತಂದೆಯ ಕುಟುಂಬದ ಹೆಸರನ್ನು ಇಟ್ಟುಕೊಳ್ಳುವುದು ತಂದೆಗೆ ಕೊಟ್ಟ ಗೌರವ, ಅದೇ ರೀತಿ ನಾನು ನನ್ನ ಪತಿಯ ಕುಟುಂಬಕ್ಕೂ ನೀಡುತ್ತೇನೆ. ಇಬ್ಬರಿಗೂ ಸಮಾನವಾದ ಗೌರವ ನೀಡಿದ್ದೇನೆ. ಎಲ್ಲವನ್ನೂ ಮುರಿದು,

ಒಂದು ಮಗುವಿಗೆ ಹೊಸ ಸರ್ ನೇಮ್ ಇಡುವುದಕ್ಕೆ ತುಂಬಾ ಶ್ರಮದ ಅಗತ್ಯವಿದೆ. ಇದೀಗ ನನ್ನ ಆಯ್ಕೆ ಮತ್ತು ನನ್ನ ಇಷ್ಟ ಇದು. ಹೀಗಾಗಿ ಇದನ್ನು ಪಾಲಿಸಿದ್ದೇನೆ ಎಂದು ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ ಸೋನಂಕಪೂರ್. ಮದುವೆಯಾದ ಬಳಿಕವೂ ಹಲವು ನಟಿಯರು ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಇದು ಪ್ರತಿಯೊಬ್ಬರ ಆಯ್ಕೆಯಾಗಿದೆ. ನಾನು ಕೂಡ ಮದುವೆಯಾದ ಬಳಿಕ ಚಿತ್ರರಂಗಕ್ಕೆ ಮತ್ತೆ ಬಂದಿದ್ದು, ನನ್ನ ಆಯ್ಕೆಯ ಪಾತ್ರಗಳನ್ನು ಮಾಡುತ್ತಿದ್ದೇನೆ ಎಂದಿದ್ದಾರೆ ಸೋನಂ ಕಪೂರ್.

Tags

Related Articles