ಸುದ್ದಿಗಳು

ದುಬಾರಿ ಡ್ರೆಸ್ ತೊಟ್ಟು ಊಟಕ್ಕೆ ತೆರಳಿದ್ದ ಸೋನಂ..!

ಮುಂಬೈ.ಏ.22: ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗಿನಿಂದ್ಲೂ ತನ್ನ ವಿಶಿಷ್ಟ ಶೈಲಿಯ ಡ್ರೆಸ್ ಗಳಿಂದಾಗಿ ಟ್ರೆಂಡ್ ಸೆಟ್ಟರ್ ಅಂತಲೇ ಗುರುತಿಸಿಕೊಂಡಾಕೆ.

ತನ್ನ ಉಡುಪಿನಿಂದಲೇ ಸದಾ ಸುದ್ದಿಯಾಗುವ ರಾಷ್ಟ್ರ ಪ್ರಶಸ್ತಿ ವಿಜೇತೆ ಸೋನಂ 33 ವರ್ಷವಾದರೂ ಧರಿಸುವ ಉಡುಪಿನಿಂದ ಚಿಕ್ಕ ಹುಡುಗಿಯಂತೆ ಕಾಣ್ತಾರೆ. ಆದ್ರೆ ಈ ಬಾರಿ ಅವರು ಧರಿಸಿದ್ದ ಡ್ರೆಸ್ ಕೇವಲ ಸುಂದರವಾಗಿರೋದಿಕ್ಕೆ ಅಲ್ಲ, ದುಬಾರಿ ಬೆಲೆಯಿಂದ ಸದ್ದು ಮಾಡ್ತಿದೆ. ಸೋನಂ ಲೈಫ್ ಸ್ಟೈಲ್ ತುಂಬಾನೇ ಕಾಸ್ಟ್ಲಿ ಇದನ್ನ ಸ್ವತಃ ಅವರ ವಸ್ತ್ರ ವಿನ್ಯಾಸಕರೇ ಹೇಳ್ತಾರೆ.

ಹೌದು ಇತ್ತೀಚೆಗೆ  ಸೋನಂ ದೆಹಲಿಯ ಇಂಡಿಯಾ ಎಕ್ಸ್ ವೆಜ್ ನಾನ್ ವೆಜ್ ಹೋಟೆಲ್ ನಲ್ಲಿ ಊಟಕ್ಕೆಂದು ತೆರಳಿದ್ದರು. ಈ ವೇಳೆ  ಸೋನಂ ಧರಿಸಿದ್ದ  ಪಫ್ ಸ್ಲಿವ್ಸ್ ಗೌವ್ ನ ಎಲ್ಲರ ಮನ ಸೆಳೆದಿತ್ತು, ಇನ್ನೂ ಈ ಅಂದದ ಡ್ರೆಸ್ ಬೆಲೆ ಬರೋಬ್ಬರಿ  67, 985 ರೂ ಗಳು. ಹೀಗಾಗಿ ಕಾಸ್ಟ್ಲಿ ಹಾಗೂ ಅಂದದ ಡ್ರೆಸ್ ತೊಟ್ಟ ಚೆಲುವೆಯಾಗಿ ಸೋನಂ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

#sonamkapoor, #costlydress, #balkaninews #filmnews, #anilkapoor, #suddigalu. #bollywoodnews

Tags