ಸುದ್ದಿಗಳು

ಸೆನ್ಸಾರ್ ಮಂಡಳಿ ಮೆಚ್ಚಿಕೊಂಡ ‘ಸೂಜಿದಾರ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಸದ್ಯದಲ್ಲಿಯೇ ತೆರೆಗೆ ಬರಲಿರುವ ಸಿನಿಮಾ

ಬೆಂಗಳೂರು.ಮಾ.14: ಹರಿಪ್ರಿಯಾ ನಟಿಸಿರುವ ‘ಸೂಜಿದಾರ’ ಸಿನಿಮಾ ಬಿಡುಗಡೆ ಸಿದ್ದವಾಗಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ವಿಷಯವನ್ನು ಚಿತ್ರತಂಡದವರು ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಬರಲಿದ್ದೇವೆ ಎಂದಿದ್ದಾರೆ.

ಇನ್ನು ಈ ಚಿತ್ರವು 131.19 ಸೆಕೆಂಡ್ ಇದ್ದು, ಇದೊಂದು ಮಹಿಳಾ ಪ್ರಧಾನ ಕಥಾಹಂದರವನ್ನು ಒಳಗೊಂಡಿದೆ. ಚಿತ್ರದಲ್ಲಿ ಹರಿಪ್ರಿಯಾ ಮುಖ್ಯ ಪಾತ್ರವನ್ನು ವಹಿಸಿದ್ದು, ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಚೈತ್ರಾ ಕೋಟೂರ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಈ ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶಿಸಿದ್ದಾರೆ. 2 ವರ್ಷಗಳ ಹಿಂದೆ ಈ ಕಥೆಯನ್ನು ಓದಿದ ಮೌನೇಶ್, ಕೂಡಲೇ ಇಂದ್ರಕುಮಾರ್ ಗೆ ಫೋನಾಯಿಸಿ ಈ ಕಥೆಯನ್ನು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿ ತೆರೆಗೆ ಬರುವ ಸನ್ನಾಹದಲ್ಲಿದೆ.

ಈ ಚಿತ್ರದಲ್ಲಿ ಹರಿಪ್ರಿಯಾ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ‘ಸೂಜಿದಾರ’ ಚಿತ್ರದ ಪೋಸ್ಟರ್ ಗಳೇ ಸಿನಿಮಾದ ಬಗ್ಗೆ ಹೆಚ್ಚಿನ ಕ್ಯೂರಿಯಾಸಿಟಿ ಹುಟ್ಟುಹಾಕುವಂತಿದೆ.

ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗುವಂಥಾದ್ದೊಂದು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ಅಭಿಜಿತ್ ಕೋಟೆಕಾರ್ ಮತ್ತು ಸುಚೇಂದ್ರನಾಥ ನಾಯಕ್ ಎಂಬ ಇಬ್ಬರು ನಿರ್ಮಾಪಕರು ಸೂಜಿದಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಚಿತ್ರಕ್ಕೆ ಸಾಥ್ ನೀಡಿದ ದರ್ಶನ್

#soojidara, #certificate, #balkaninews #kannadasuddigalu

Tags