ಸುದ್ದಿಗಳು

‘ಸೂಜಿದಾರ’ ಚಿತ್ರದ ಕುರಿತಂತೆ ನಟಿ ಹರಿಪ್ರಿಯಾ ಅಸಮಾಧಾನ: ಚಿತ್ರತಂಡಕ್ಕೆ ಶಾಕ್..!!!

ನನಗೆ ಹೇಳಿದ ಕಥೆಯೇ ಒಂದು, ತೆರೆಯ ಮೇಲೆ ಮೂಡಿ ಬಂದಿದ್ದೇ ಒಂದು

ಬೆಂಗಳೂರು.ಮೇ.15: ಕಳೆದ ಶುಕ್ರವಾರ ತೆರೆ ಕಂಡು ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಸೂಜಿದಾರ’ ಚಿತ್ರದ ಕುರಿತಂತೆ ನಟಿ ಹರಿಪ್ರಿಯಾ ಗರಂ ಆಗಿದ್ದಾರೆ. ‘ನಾನು ಈ ಸಿನಿಮಾ ತೆರೆ ಕಂಡ ಅಭಿಮಾನಿಗಳೊಂದಿಗೆ ನೋಡುವಾಗ ಬೇಸರವಾಯಿತು. ನನ್ನ ಜೊತೆಗೆ ಚರ್ಚೆ ಮಾಡಿದ ಅಂಶಗಳು ಅಷ್ಟಾಗಿ ಕಾಣಿಸಲಿಲಲ್. ಬೇಕಿಲ್ಲದ ದೃಶ‍್ಯಗಳನ್ನು ಜಾಸ್ತಿಯೇ ತೋರಿಸಲಾಗಿದೆ. ಅದನ್ನು ಮುಂಚೆಯೇ ನನ್ನ ಬಳಿ ಚರ್ಚಿಸಬಹುದಾಗಿತ್ತು’ ಎಂದಿದ್ದಾರೆ.

‘ಎಂದಿನಂತೆ ಭಾನುವಾರ ಅಭಿಮಾನಿಗಳ ಜೊತೆ ಮಾತುಕತೆ ಮಾಡುತ್ತೇನೆ. ಆದರೆ ಈ ಭಾರಿ ಸಂವಾದದ ಬದಲಾಗಿ ಒಂದು ಚಿಂತೆಯನ್ನು ಮೂಡಿಸಿದೆ. ಇವತ್ತು ಸಾಕಷ್ಟು ಅಭಿಮಾನಿಗಳು ಮನೆಗೆ ಬಂದಿದ್ದರು. ಮಾಮೂಲಿಯಂತೆ ಸೆಲ್ಫಿಗಳನ್ನು ಪಡಿದುಕೊಳ್ಳುತ್ತಾರೆ.

ಹೀಗೆ ಅಭಿಮಾನಿಗಳು ನನ್ನ ನಟನೆಯ ‘ಸೂಜಿದಾರ’ ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಚಿತ್ರದಲ್ಲಿ ನನ್ನಿಂದ ಜಾಸ್ತಿ ನಿರೀಕ್ಷೆ ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಬೇಸರ ಮಾಡಿಕೊಂಡು ಚಿತ್ರಮಂದಿರದಿಂದ ಹೊರಬಂದಿದ್ದಾರೆ.

ಹೀಗಾಗಿ ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ. ಮುಂದಿನ ಸಿನಿಮಾಗಳಲ್ಲಿ ನಿಮ್ಮನ್ನು ಇನ್ನಷ್ಟು ರಂಜಿಸುತ್ತೇನೆಂಬ ಭರವಸೆ ನೀಡುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಹರಿಪ್ರಿಯಾ ‘ಸೂಜಿದಾರ’ ಚಿತ್ರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದು, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.ಇನ್ನು ಹರಿಪ್ರಿಯಾ ಮಾಡಿರುವ ಈ ಆರೋಪದ ಕುರಿತಂತೆ ಚಿತ್ರದ ನಿರ್ದೇಶಕ ಮೌನೇಶ್ ಬಡಿಗೇರ್ ಅವರು, ‘ಹರಿಪ್ರಿಯ ಅವರ ಹೇಳಿಕೆಯಿಂದ ನಮಗೆ ಆಶ್ಚರ್ಯವಾಗಿದೆ. ಸ್ಕ್ರಿಪ್ಟ್ ಅವರ ಬಳಿಯೇ ಇದೆ. ಬೇಕಿದ್ದಲ್ಲಿ ಮತ್ತೊಮ್ಮೆ ಚೆಕ್ ಮಾಡಿಕೊಳ್ಳಲಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಹರಿಪ್ರಿಯಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಸದ್ಯ ಬಹುಭಾಷನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. ಅಲ್ಲದೆ ಇದೇ ತಿಂಗಳ 24 ರಂದು ‘D/O ಪಾರ್ವತಮ್ಮ’ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಗಾಂಧಿನಗರದಲ್ಲಿ ದಿವಾಕರ್ ‘ರೇಸ್’ ಪ್ರಾರಂಭ!!

#soojidara, #haripriya, #statement, #balkaninews #mouneshbadiger, #filmnews, #kannadasuddigalu

Tags

Related Articles