ಸುದ್ದಿಗಳು

ಸುದ್ದಿಗೋಷ್ಟಿಯಲ್ಲಿ ಸೂಜಿದಾರ ಚಿತ್ರತಂಡ ಹೇಳಿದ್ದೇನು..?

ಬೆಂಗಳೂರು,ಮೇ.8: ನಾಳೆಯಷ್ಟೆ ಬಿಡುಗಡೆಯಾಗುತ್ತಿರುವ ಸೂಜಿದಾರ ಚಿತ್ರತಂಡ ಸುದ್ದಿಗೋಷ್ಟಿ ನಡೆಸಿದೆ.

ಹರಿಪ್ರಿಯ ನಟನೆಯ ವಿಭಿನ್ನ ಕಥೆಯ ಸೂಜಿದಾರ ಸಿನಿಮಾ ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸೌಂಡ್ ಮಾಡುತ್ತಿದೆ.. ಈ ವಾರ ತೆರೆಗೆ ಸಿದ್ದವಾಗಿರೋ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿ ಹರಿಪ್ರಿಯ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾ ತಂಡ ಸಿನಿಮಾ ಬಿಡುಗಡೆಯ ಖುಷಿಯನ್ನು ಹಂಚಿಕೊಂಡಿದೆ.

ಮೈ ಮನ ಪೋಣಿಸಲು ಹೊರಟಿರೋ ಹೊಸ ಅಧ್ಯಾಯ ಇದಾಗಿದ್ದು, ಈ ಚಿತ್ರದ ಮೂಲಕ ನಿರ್ದೇಶಕ ಮೌನೇಶ್ ಬಡಿಗೇರ್ ಸಂದೇಶ ಹೇಳುವ ಬದಲಾಗಿ ಒಂದು ಎಕ್ಸ್‌ಪೀರಿಯನ್ಸ್ ಮಾಡಿಸುವ ಪ್ರಯತ್ನ ಮಾಡ್ತಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿಯೇ ಸಿನಿಮಾ ಅಭಿಮಾನಿಗಳ ಗಮನ ಸೆಳಿತಿದ್ದು, ಚಿತ್ರ ಸಹಜವಾಗಿಯೇ ಇಷ್ಟವಾಗುತ್ತೆ. ಅಂದಹಾಗೆ ಚಿತ್ರದ ನಿರ್ದೇಶಕ ಮೌನೇಶ್ ಬಡಿಗೇರ್ ನಿನಾಸಂನ ವಿದ್ಯಾರ್ಥಿಯಾಗಿದ್ದು, ಸಿನಿಮಾ ಅಭಿಮಾನಿಗಳಿಗೆ ಮನರಂಜನೆಯ ಜೊತೆಗೆ ಒಂದಿಷ್ಟು ವಾಸ್ತವಿಕ ಸಂಗತಿಯನ್ನು ಹೇಳ ಹೊರಟಿದ್ದಾರೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಯಶವಂತ್ ಶೆಟ್ಟಿ ಹಾಗೂ ಹರಿಪ್ರಿಯ.

Image may contain: 1 person, text

ಸಿನಿಮಾ ಬಗ್ಗೆ ನಾಯಕನಾಯಕಿಯ ಮಾತು

ಇನ್ನು ಸಿನಿಮಾ ಬಗ್ಗೆ ಮಾತನಾಡಿದ ನಟಿ ಹರಿಪ್ರಿಯ, ಇದೊಂದು ಮಧ್ಯಮ ವರ್ಗದ ಮಹಿಳೆ ಪಾತ್ರ ಮುಖ್ಯವಾಗಿದೆ. ಮೊದಲ ಬಾರಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಾಂಗ್ ಟ್ರೇಲರ್ ಯಶಸ್ವಿಯಾಗಿದೆ. ಹಾಗಾಗಿ ಸಿನಿಮಾವನ್ನು ಒಪ್ಪುತ್ತಾರೆ ಅನ್ನೋ ನಂಬಿಕೆ ಇದೆ ಎಂದ್ರು. ಇನ್ನು ನಾಯಕ ನಟ ಮಾತನಾಡಿ ಸಿನಿಮಾ ಮೇಲಿನ ಹೋಪ್ ಹೆಚ್ಚಾಗಿದೆ. ಸಿನಿಮಾ ಟ್ರೇಲರ್ ಸಾಕಷ್ಟು ಹಿಟ್ ಕೊಟ್ಟಿದೆ. ಮೊದಲ ಬಾರಿ ವಿಭಿನ್ನ ಹಾಗೂ ನೆಗಟೀವ್ ಶೇಡ್ ಬಿಟ್ಟು ಪಾತ್ರ ನಿರ್ವಹಿಸಿದ್ದೇನೆ ಹಾಗಾಗಿ ಸಿನಿಮಾ ಎಕ್ಸೈಟ್ ಮೆಂಟ್ ಇದ್ದೇ ಇದೆ. ಈ ಸಿನಿಮಾ ನನ್ನ ಜೀವನದಲ್ಲಿ ಮುಖ್ಯವಾಗಿದೆ ಎಂದರು.

ಶುಕ್ರವಾರ ತೆರೆಗೆ ಬರಲಿರೋ ಸಿನಿಮಾ

ಇನ್ನು ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್, ಬಿ.ಎಂ.ಗಿರಿರಾಜ್ ಮುಂತಾದವ್ರು ಅಭಿನಯಿಸಿದ್ದಾರೆ. ಇದೇ ಮೇ ೧೦ಕ್ಕೆ ತೆರೆಗೆ ಬರಲು ರೆಡಿಯಾಗಿರೋ ಸಿನಿಮಾ ಈಗಾಗ್ಲೇ ಟ್ರೇಲರ್ ಮೂಲಕ ಜನ್ರ ಮನಸನ್ನ ಕದಿಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಚಿತ್ರದಲ್ಲಿ ಕಲರ್‌ಫುಲ್ ಸಾಂಗ್ಸ್ ಇದ್ದು, ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ ಭಿನ್ನಶಟ್ಜ. ಈ ಸಿನಿಮಾಗೆ ಸಚ್ಚಿಂದ್ರನಾಥ್ ನಾಯಕ್ ಹಾಗೂ ಅಭಿಜಿತ್ ಕೊಟೆಗಾರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.. ಇನ್ನು ಈ ಸಿನಿಮಾವನ್ನ ವೆಂಕಟ್‌ಗೌಡ ಹಂಚಿಕೆ ಮಾಡಿದ್ದಾರೆ.

‘ಪುರಾವೆ’ ಚಿತ್ರದ ಟ್ರೇಲರ್ ಲಾಂಚ್

#soojidara #tollywood #sandalwood #haripriya

 

 

Tags