ಸುದ್ದಿಗಳು

ಶ್ರೀಲಂಕಾ ದಾಳಿಗೆ ಮಿಡಿಯುತ್ತಿದೆ ಸಿನಿ ತಾರೆಯರ ಕಂಬನಿ

ಬೆಂಗಳೂರು, ಏ.22:

ಶ್ರೀಲಂಕಾದ ಕೊಲೊಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಿಂದಾಗಿ ಸಾವಿನ ಹಾಗೂ ಗಾಯಗೊಂಡಿರುವ ಸಂಖ್ಯೆ ಅಧಿಕಗೊಂಡಿದೆ. 200ಕ್ಕೂ ಅಧಿಕ ಜನರು ಮೃತಪಟ್ಟು 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈಗ ಬಾಂಬ್ ದಾಳಿಯನ್ನು ಇತ್ತೀಚಿಗಿನ ವರ್ಷಗಳಲ್ಲಿ ಕಂಡಂತಹ ಭೀಕರ ದಾಳಿ ಎಂದು ಹೇಳಲಾಗುತ್ತದೆ. ಒಟ್ಟು ಎಂಟು ಕಡೆ ಆತ್ಮಹತ್ಯೆ ದಾಳಿ ಮೂಲಕ ಈ ಸರಣಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಈ ದಾಳಿಯನ್ನು ಇಡೀ ಪ್ರಪಂಚ ಖಂಡಿಸುತ್ತಿದೆ. ಇದೀಗ ಸಿನಿ ತಾರೆಯರು ಕೂಡ ಕಂಬನಿ ಮಿಡಿಯುತ್ತಿದ್ದಾರೆ.

ಈಸ್ಟರ್ ಪ್ರಾರ್ಥನೆ ವೇಳೆ ಘಟನೆ

ಕೊಲೊಂಬೋದ ಹೋಟೆಲ್ ಹಾಗೂ ಚರ್ಚ್, ನಗರದ ಹೊರಗಡೆ ಇರುವ ಎರಡು ಚರ್ಚ್ ಕೂಡ ದಾಳಿಯನ್ನು ಮಾಡಲಾಗಿತ್ತು. ಸೆಬಾಸ್ಟಿಯನ್ ಚರ್ಚ್, ಸೇಂಟ್ ಆಂಟನಿ ಚರ್ಚ್ ಸೇರಿದಂತೆ ಒಟ್ಟು ಮೂರು ಚರ್ಚ್ ಹಾಗೂ ಶಾಂಗ್ರಿಲಾ, ಕಿಂಗ್ಸ್ ಬ್ಯೂರಿ ಹೋಟೆಲ್ ಗಳಲ್ಲಿ ಬಾಂಬ್ ಸ್ಪೋಟ ನಡೆದಿದೆ. ಭಾನುವಾರದ ಈಸ್ಟರ್ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ ಸಂಭವಿಸಿದ್ದು, ಭಾರತೀಯರನ್ನು ಗುರಿಯಾಗಿಸಿ ಐಸಿಸ್ ಉಗ್ರರಿಂದ ಈ ದಾಳಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

Image result for sri lanka bomb blast 2019

ಸಿನಿ ತಾರೆಯರ ಕಂಬನಿ

ಇದೀಗ ಈ ದಾಳಿಯನ್ನು ಇಡೀ ಜನತೆ ಖಂಡಿಸುತ್ತಿದೆ. ಶಾಂತಿ ದೂತನಿಗೆ ರಕ್ತದೋಕುಳಿ ಮಾಡಿದ್ದು ಎಷ್ಟು ಸರಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೀಗ ಸಿನಿ ಮಂದಿ ಕೂಡ ಈ ದಾಳಿಯನ್ನು ಖಂಡಿಸುವುದರ ಜೊತೆಗೆ ಕಂಬನಿ ಮಿಡಿಯುತ್ತಿದ್ದಾರೆ.

ಇಂಥಹ ಘಟನೆ ನಡೆಯಬಾರದಿತ್ತು

ನಟ ವಸಿಷ್ಠ ಸಿಂಹ ನೋವಿನಿಂದ ಟ್ವಿಟ್ ಮಾಡಿದ್ದಾರೆ. ಈ ತರಹದ ದಾಳಿಗಳು ಭೂಮಿ ಮೇಲೆ ಎಲ್ಲಿಯೂ ನಡೆಯಬಾರದು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಆ ಭೂತವನ್ನು ತೆಗೆದು ಹಾಕಲು ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂದಿದ್ದಾರೆ. ಇನ್ನೂ ಈ ಬಗ್ಗೆ ಟ್ವಿಟ್ ಮಾಡಿರುವ ಸುಮಲತ ಅಂಬರೀಶ್, ಇದು ತುಂಬಾನೇ ತಪ್ಪು, ಇದು ಖಂಡನಾರ್ಹ ಘಟನೆ, ಯಾವ ವಿಕೃತವಾದ ಮನಸ್ಸುಗಳು ಇಂಥಹ ಕೆಲಸ ಮಾಡಿವೆ..? ದಾಳಿಯಲ್ಲಿ ತುತ್ತಾದ ಅಮಾಯಕರ ಜೀವಗಳ ಕುಟುಂಬದವರಿಗೆ ಸಾಂತ್ವನ ಹೇಳೋಕೆ ಯಾವ ಪದಗಳೂ ಇಲ್ಲ. ಇಂಥಹ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ.

ಐವತ್ಮೂರಾದರೂ ಸಲ್ಮಾನ್ ಖಾನ್ ಯಾಕೆ ಇನ್ನೂ ಮದುವೆಯಾಗಿಲ್ಲ ನಿಮಗೆ ಗೊತ್ತೆ..!!?!!

#balkaninews #vasistansimha #srilankabombblast2019 #sumalathatwitter #sandalwood

Tags