ಸುದ್ದಿಗಳು

ಕಿಚ್ಚನ ಹೇರ್ ಸ್ಟೈಲ್ ಆಯ್ತು ಇದೀಗ,’ಭರಾಟೆ’ ಹುಡುಗನ ಹೊಸ ಹೇರ್ ಸ್ಟೈಲ್!!

ಅಲೆಕ್ಸ್ ಅನ್ನೋ ಇಂಟರ್ ನ್ಯಾಷನಲ್ ಹೇರ್ ಸ್ಟೈಲಿಸ್ಟ್

ಬೆಂಗಳೂರು,ನ.7: ಸಿನಿಮಾದಲ್ಲಿ ಹೀರೋಗಳು ಏನೇ ಸ್ಟೈಲ್ ಮಾಡಿದರೂ ಅದು ಟ್ರೆಂಡ್ ಆಗುತ್ತದೆ.. ಅದರಲ್ಲೂ ಇತ್ತೀಚೆಗೆ ‘ದಿ ವಿಲನ್’  ಸಿನಿಮಾ ಬಿಡುಗಡೆಯಾದ ನಂತರ ಅಂತೂ ಕಿಚ್ಚನ ಹೇರ್ ಸ್ಟೈಲ್ ಸಖತ್ ಟ್ರೆಂಡ್ ಆಗಿತ್ತು.. ಕಿಚ್ಚ ಸುದೀಪ್ ದು ಒಂದು ಸ್ಟೈಲ್ ಇದೆ. ಅವರ ಹೇರ್ ಸ್ಟೈಲ್ ಗೆ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಇದ್ದಾರೆ,  ಸುದೀಪ್ ಹೇರ್ ಸ್ಟೈಲ್ ಬದಲಾಗಿದ್ದು ಹೆಬ್ಬುಲು ಸಿನಿಮಾದಲ್ಲಿ ಅಲ್ಲಿಂದ ಕಿಚ್ಚನ ಲುಕ್ ಬದಲಾಯ್ತು.. ಇಷ್ಟೆಲ್ಲಾ ಮಾಡಿಸಿದ್ದು ಹೆಬ್ಬುಲಿ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್.. ಇದಕ್ಕಾಗಿ ಅಲೆಕ್ಸ್ ಅನ್ನೋ ಇಂಟರ್ನ್ಯಾಷನಲ್ ಹೇರ್  ಸ್ಟೈಲಿಸ್ಟ್ ರನ್ನು ಕರೆಸಿಕೊಂಡು ಕಿಚ್ಚನಿಗೆ ವಿಭಿನ್ನ ಗೆಟಪ್ ನೀಡಿದರು ಶ್ರೀನಿವಾಸ್.. .

ಶ್ರೀ ಮುರಳಿಮದಗಜ’  

ಈ ಮೊದಲು ‘ಮದಗಜ’  ಅನ್ನುವ ಶೀರ್ಷಿಕೆ  ಇಟ್ಟಿದ್ದು ಈಗ ಎಂ.21ಅಂತ ಟೈಟಲ್​ ಬದಲಾಯಿಸಿಕೊಂಡಿರೋ ಸಿನಿಮಾದ ಫಸ್ಟ್ ಲುಕ್​​  ಡಿಸೆಂಬರ್ 17 ರಂದು ಶ್ರೀಮುರಳಿ ಅವರ ಹುಟ್ಟು ಹಬ್ಬದಂದು ರಿವೀಲ್​ ಆಗಲಿದೆ. ಈ ಚಿತ್ರಕ್ಕಾಗಿ ಶ್ರೀಮುರಳಿ ಹೇರ್ ಸ್ಟೈಲ್  ಬದಲಾಯಿಸುತ್ತಿದ್ದಾರೆ. ಇವರ ಹೇರ್ ಸ್ಟೈಲ್ ನನ್ನು ಬದಲಾಯಿಸಲು ಅಲೆಕ್ಸ್ ಅವರನ್ನು ಕರೆಯಲಾಗಿದೆ..

ಶ್ರೀ ಮುರಳಿ ಹೇರ್ ಸ್ಟೈಲ್

ಇನ್ನು ಸಿನಿಮಾದಲ್ಲಿ ಶ್ರೀಮಂತನ  ಗೆಟಪ್ ನಲ್ಲಿ ಶ್ರೀಮುರಳಿ ಹೇರ್​ಸ್ಟೈಲ್​​​​​ ಕ್ರೇಜ್​​ ಕ್ರಿಯೇಟ್ ಮಾಡಲಿದ್ದು,  ಶ್ರೀ ಮುರಳಿ ಹೇರ್ ಸ್ಟೈಲ್ ಹೇಗೆ ಮಾಡಿದರೆ ಚೆನ್ನ ಎಂದು ಅಲೆಕ್ಸ್  ತಲೆಗೆಡಿಸಿಕೊಂಡಿದ್ದಾರಂತೆ.. ಅಲೆಕ್ಸ್​ ಈಗಾಗಲೇ ಬಾಲಿವುಡ್ ನ ದಿಗ್ಗಜರ ಹೇರ್ ಸ್ಟೈಲ್ ಮಾಡಿದ್ದಾರೆ..  ಇವರು  ಹೇರ್ ಸ್ಟೈಲ್ ಬದಲಿಸೋಕೆ ಬರೋಬ್ಬರಿ 1 ಲಕ್ಷ ಚಾರ್ಜ್ ಮಾಡುತ್ತಾರೆ..

Tags