ಸುದ್ದಿಗಳು

ತೆರೆಕಂಡ 4ನೇ ದಿನಕ್ಕೆ ಬರೋಬ್ಬರಿ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಭರಾಟೆ’   

‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನದ, ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಭರಾಟೆ’ ಸಿನಿಮಾ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದೆ. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳೆಯುತ್ತಿರುವ ಈ ಚಿತ್ರವು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ.

ರಾಜ್ಯದ 360 ಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಂಡ ಈ ಚಿತ್ರವು ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಅಲ್ಲದೇ ಮೊದಲ ದಿನವೇ ಬರೋಬ್ಬರಿ 8.36 ಕೋಟಿ ರೂಪಾಯಿ ಗಳಿಕೆ ಕಂಡು ಹೊಸ ಇತಿಹಾಸ ಸೃಷ್ಟಿಸಿತ್ತು. ವಿಶೇಷವೆಂದರೆ ಈ ಚಿತ್ರವು ತೆರೆಕಂಡ ನಾಲ್ಕನೆಯ ದಿನಕ್ಕೆ 25 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯನ್ನೇ ಶೇಕ್ ಮಾಡಿದೆ.

ಚಿತ್ರದಲ್ಲಿ ಶ್ರೀಮುರುಳಿ ಇದೇ ಮೊದಲ ಬಾರಿಗೆ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಸಾಯಿಕುಮಾರ್ ಸಹೋದರರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರುವುದರಿಂದ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಸದ್ಯ ತೆರೆ ಕಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ದಾಖಲೆ ಬರೆದರೂ ಅಚ್ಚರಿಯಿಲ್ಲ.

‘ಅರ್ನಾಲ್ಡ್’ ದೊಡ್ಡ ಫ್ಯಾನ್ ಅಂತೆ ನಮ್ಮ ಅಭಿನಯ ಚಕ್ರವರ್ತಿ

#SriMurali #Bharaate #Filmnews #Shreeleela #BharaateCollection #kannadaSuddigalu

Tags