ಸುದ್ದಿಗಳು

‘ಭರಾಟೆ’ಗೆ ಡಬ್ಬಿಂಗ್ ಶುರು ಗುರು..!!

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಬಹುನಿರೀಕ್ಷಿತ ‘ಭರಾಟೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಎಡಿಟಿಂಗ್ ಕೆಲಸಗಳನ್ನು ಮುಗಿಸಿದ್ದ ಚಿತ್ರತಂಡ, ಇದೀಗ ಮಾತಿನ ಮರು ಜೋಡಣೆ ಕಾರ್ಯದಲ್ಲಿ ಸಕ್ರಿಯವಾಗಿದೆ.

ನಟ ಶ್ರೀಮುರುಳಿ ಇದೀಗ ತಮ್ಮ ಮಾತಿನ ಭಾಗದ ಡಬ್ಬಿಂಗ್ ಕೆಲಸಗಳನ್ನು ಮಾಡುವಲ್ಲಿ ತಲ್ಲೀನರಾಗಿದ್ದು, ಚಿತ್ರದ ಕುರಿತಂತೆ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ, ಈ ಚಿತ್ರವು ಸೆ. 27 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಈಗಾಗಲೇ ಚಿತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿದ್ದು, ‘ಬಹದ್ದೂರ್’, ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ‘ಕಿಸ್’ ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿರುವ ಈ ಚಿತ್ರದಲ್ಲಿ ಹಿರಿಯ ನಟಿ ತಾರಾ, ಅವಿನಾಶ್, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ಮಂಜು ,ದೀಪಕ್ ಶೆಟ್ಟಿ, ರಾಜ್ ಗುರು, ಮೋಹನ್ , ಶರತ್ ಲೋಹಿತಾಶ್ವ ಸೇರಿದಂತೆ ಅನೇಕರು ನಟಿಸಿದ್ದಾರೆ.

ಕಿರುತೆರೆಯಲ್ಲೂ ಬಂತು “ನಾನು ನನ್ನ ಕನಸು”

#srimuruli #dubbing #busy #in #bharate #movie #balkaninews #shreeleela #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags