ಸುದ್ದಿಗಳು

ಧೈರ್ಯವಿದ್ದರೆ ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಿ: ಪೂನಂಗೆ ಸವಾಲು ಹಾಕಿದ ಶ್ರೀ ರೆಡ್ಡಿ

ಕಳೆದ ಎರಡು ವರ್ಷಗಳಿಂದ  ಪೂನಂ ಕೌರ್ ಹೆಸರನ್ನು ಬಹಿರಂಗಪಡಿಸದೆ ಕೆಲವು ವ್ಯಕ್ತಿಗಳ ಬಗ್ಗೆ ಟ್ವೀಟ್‌ ಮಾಡುತ್ತಿದ್ದಾರೆ.

ಇತ್ತೀಚೆಗೆ ಪೂನಂ, ‘ಸುಳ್ಳುಗಾರ ರಾಜಕಾರಣಿಯಾಗಬಹುದು, ಆದರೆ ಎಂದಿಗೂ ಲೀಡರ್ ಆಗುವುದಿಲ್ಲ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದರು.

ಪೂನಂ ಕೌರ್ ಅವರು ಪವನ್ ಕಲ್ಯಾಣ್ ಅವರನ್ನು ಗುರಿಯಾಗಿಸಿಕೊಂಡು ಈ ರೀತಿ ಬರೆದಿದ್ದಾರೆ ಎಂದು ಹೆಚ್ಚಿನ ಜನರು ಭಾವಿಸಿದ್ದರು. ಆದರೆ ಅವರು ಇಲ್ಲಿಯವರೆಗೆ ಅದಕ್ಕೆ ಸ್ಪಷ್ಟನೆ ಕೊಟ್ಟಿಲ್ಲ.

ಆದರೆ ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀ ರೆಡ್ಡಿ ಪೂನಂ ಕೌರ್ ಗೆ ಗೋಡೆಯ ಮೇಲಿನ ಬೆಕ್ಕಿನಂತೆ ಇರಬಾರದು. ಧೈರ್ಯವಿದ್ದರೆ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವಂತೆ ಪೂನಂಗೆ ಸವಾಲು ಹಾಕಿದರು. ಆ ರಾಜಕಾರಣಿಯ ವಿರುದ್ಧ ಪೂನಂ ದೂರು ನೀಡಿದರೆ ತನ್ನ ಗ್ಯಾಂಗ್ ಎಲ್ಲವನ್ನು ನೋಡಿಕೊಳ್ಳುತ್ತದೆ ಎಂದು ಟ್ವಿಟರ್ ನಲ್ಲಿ ಭರವಸೆ ನೀಡಿದರು.

ಈಗ ಪೂನಂ ಕೌರ್ ಏನು ಮಾಡುತ್ತಾರೆ? ರಾಜಕಾರಣಿಯ ಹೆಸರನ್ನು ಬಹಿರಂಗಪಡಿಸುವ ಧೈರ್ಯವನ್ನು ತೋರಿಸುತ್ತಾರೆಯೇ ಅಥವಾ ಶ್ರೀ ರೆಡ್ಡಿ ಎಸೆದ ಸವಾಲನ್ನು ನಿರ್ಲಕ್ಷಿಸುತ್ತಾರೆಯೇ? ಏನು ಬೇಕಾದರೂ ಆಗಬಹುದು …ಅಲ್ಲವೇ?.

‘ನಿನ್ನೆ ಪ್ರೀತಿಸುವೆ’ ಖ್ಯಾತಿಯ ನಟಿ ರಾಶಿ ಮನೆ ಮೇಲೆ ಐಟಿ ದಾಳಿ

#balkaninews #srireddy #challenge #poonam

Tags