ಸುದ್ದಿಗಳು

ವೈರಲ್ ಆದ ಶ್ರೀ ರೆಡ್ಡಿ ವಿಡಿಯೋ; ಅಂಥದ್ದೇನಿದೆ?

ಟಾಲಿವುಡ್ ನಟಿ ಶ್ರೀ ರೆಡ್ಡಿ ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಅಂತೀರಾ? ನಾಳೆ ತೆರೆಗೆ ಬರುತ್ತಿರುವ A1( Accused No. 1) ನ ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ಅವರ ಹಾಡಿಗೆ ಪರ್ ಫಾರ್ಮೆನ್ಸ್ ಮಾಡಿದ್ದಾರೆ.

ಒರಿಜಿನಲ್ ವಿಡಿಯೋದಲ್ಲಿ ಚಿತ್ರದ ನಾಯಕಿ ಬ್ರಾಹ್ಮಣ ಜಾತಿಯವಳಾಗಿದ್ದು, ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಆಫ್ ಬಾಯ್ಲ್ಡ್ ಎಗ್ ತಿನ್ನುತ್ತಾಳೆ. ಮೊದಲಿಗೆ ಈ ಚಿತ್ರದ ಟೀಸರ್ ಬಂದಾಗ ವೀಕ್ಷಕರು ಸಾಕಷ್ಟು ಟೀಕೆಗಳನ್ನು ಮಾಡಿದರು. ವಿಶೇಷವಾಗಿ ಮಾಧ್ಯಮದವರು ಕೆಟ್ಟ ಅಭಿರುಚಿ ಹೊಂದಿರುವ ಚಿತ್ರ ಎಂದರು.

ಆದರೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಸಂತಾನಂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದರಿಂದ ನೀವು ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಬೇಕಾಗಿತ್ತು, ನಿಜವಾಗಿಯೂ ಜನರ ಭಾವನೆಗಳನ್ನು ನೋಯಿಸುವ ಉದ್ದೇಶ ನಮಗಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುವ ಅಗತ್ಯವಿಲ್ಲ.ಇದು ಮಾಧ್ಯಮಗಳು ಮಾಡುತ್ತಿರುವ ಅಗ್ಗದ ಪ್ರಚಾರ ಎಂದು ಆರೋಪಿಸಿದ್ದರು.

ಎ 1 ಅನ್ನು “ನಳಯ್ಯ ಇಯಕ್ಕುನಾರ್” ಜಾನ್ಸನ್ ನಿರ್ದೇಶಿಸಿದ್ದಾರೆ ಮತ್ತು ಎಸ್. ರಾಜ್ ನಾರಾಯಣನ್ ನಿರ್ಮಿಸಿದ್ದಾರೆ.ಸಂತಾನಂ ಮತ್ತು ತಾರಾ ಅಲಿಶಾ ಬೆರ್ರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

#balkaninews #srireddy #video #videoviral #a1movie # santhanam

Tags