ಸುದ್ದಿಗಳು

ಅಯ್ಯೋ ನಂಗೆ ಏಡ್ಸ್ ಇದ್ಯಾ…?

ವಿವಾದಾತ್ಮಕ ತೆಲುಗು ನಟಿ ಶ್ರೀರೆಡ್ಡಿ ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಕ್ಯಾಸ್ಟಿಂಗ್ ಕೌಚ್ ಕುರಿತಾಗಿ ಮತ್ತು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಆದಾರದ ಮೇಲೆ ತಕ್ಕ ಸಾಕ್ಷ್ಯಾದಾರಗಳನ್ನು ಇಟ್ಕೊಂಡು ತಮ್ಮದೇ ಆದ ಶೈಲಿಯಲ್ಲಿ ಮಾಧ್ಯಮಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟದ ಮುನ್ನುಡಿ ಬರೆಯುವುದರೊಂದಿಗೆ ತುಂಬಾನೇ ದೂರ ಪ್ರಯಾಣಿಸಿದ್ದಾರೆ ಈ ಕುರಿತಾಗಿ ನಟಿ ಶ್ರೀರೆಡ್ಡಿಯವರು ಹಲವಾರು ಪರ ವಿರೋಧಗಳನ್ನು ಹದರಿಸುವುದರ ಮೂಲಕ ಸಾಕಷ್ಟು ಟೀಕೆ ಟಪ್ಪಣೆಗಳಿಗೆ ಗುರಿಯಾಗಿದ್ದರು ಎನ್ನುವ ವಿಷಯ ಈಗಾಗಲೇ ಮಾಧ್ಯಮಗಳು ಅಪ್ಡೇಟ್ ಮಾಡ್ತನೇ ಇವೆ.

ಪ್ರಸ್ತುತ ಈ ನಟಿಯ ನಡೆಯನ್ನು ಪ್ರಶ್ನಿಸಿ ಅನೇಕ ಟ್ರೋಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಹೀನಾ ಮಾನವಾಗಿ ಜಾಡಿಸುವುದರ ಮೂಲಕ ಇವರ ಕುಟುಂಬ ಸದಸ್ಯರನ್ನು ಸಹ ಅಶ್ಲೀಲತೆಯ ಬಯ್ಗುಳೊಂದಿಗೆ ಅವರ ಮಾನಾ ಮರ್ಯಾದೆಯನ್ನು ಹರಾಜಿಗಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಇವರ ಪೋಟೋಗೆ ಹೂವಿನ ಹಾರ ಹಾಕುವುದರ ಮೂಲಕ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಕಷ್ಟು ಅಸಹ್ಯವಾಗಿ ಇವರನ್ನು ನಡೆಸಿಕೊಂಡಿದ್ದರು, ಈಗ ಇದೇ ರೀತಿಯಲ್ಲಿ ನಟಿ ಶ್ರೀರೆಡ್ಡಿಯವರಿಗೆ HIV AIDS ಶಂಕಿತ ಪಟ್ಟವನ್ನು ಕೊಡುವುದರ ಮೂಲಕ ಅವರು ಶೀಘ್ರದಲ್ಲೇ ನಮ್ಮನ್ನು ತ್ಯಜಿಸಲಿದ್ದಾರೆಂದು ಪೋಸ್ಟ್ ಮಾಡಿರುವ ಘಟನೆ ವರದಿಯಾಗಿದೆ.

ಈ ನಿಟ್ಟಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಟಿ ಶ್ರೀರೆಡ್ಡಿ ಈ ರೀತಿಯ ಅಸಹ್ಯದ ಮಾತುಗಳಿಂದ ಹಾಗು ನನಗೆ HIV AIDS ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ನನ್ನ ಮಾನ ಹಾನಿ ಮಾಡಿದ್ದಾರೆ ಈ ಕುರಿತಾಗಿ ಸೈಬರ್ ಕ್ರೈಂ ಆಧಾರದ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದೇನೆ. ಜೊತೆಗೆ ಈ ರೀತಿ ಪೋಸ್ಟ್ ಮಾಡುವವರನ್ನು ನೋಡಿದರೇ ನನಗೆ ಈ ದೇಶದಲ್ಲಿ ಒಂದು ರೀತಿಯ ರೇಪಿಸ್ಟ್ ಸೊಸೈಟಿ ಹಾಗು ಪುರುಷ ಪ್ರಧಾನ ಸಮಾಜವನ್ನು ಕೆಲವರು ಸೃಷ್ಟಿಸುತ್ತಿದ್ದಾರೆ ಎಂದು ನಟಿ ಶ್ರೀರೆಡ್ಡಿ ಹೇಳಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *