ಸುದ್ದಿಗಳು

ಮುಂದಿನ ಚಿತ್ರದಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶ್ರೀ ರೆಡ್ಡಿ

ಶ್ರೀ ರೆಡ್ಡಿ ಕಳೆದ ವರ್ಷ ಹೈದರಾಬಾದ್‌ನಿಂದ ಗಡಿಪಾರದ ಮೇಲೆ ಚೆನ್ನೈಗೆ ತೆರಳಿದ್ದರು. ಆ ನಂತರ ಕಾಲಿವುಡ್ ನಲ್ಲಿ ಕೆಲವು ಅವಕಾಶಗಳಿಗಾಗಿ ಪ್ರಯತ್ನಿಸಿದರು.

ಆದರೆ ಅಂತಿಮವಾಗಿ ಶ್ರೀ ರೆಡ್ಡಿ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ‘ಕ್ಲೈಮ್ಯಾಕ್ಸ್’ ಎಂಬ ಈ ಚಿತ್ರವನ್ನು ಭವಾನಿ ಶಂಕರ್ ನಿರ್ದೇಶಿಸುತ್ತಿದ್ದಾರೆ.

ಅತ್ಯಂತ ಕುತೂಹಲಕಾರಿ ಅಂಶವೆಂದರೆ ಈ ಚಿತ್ರದಲ್ಲೂ ಶ್ರೀ ರೆಡ್ಡಿ ವಿವಾದಾತ್ಮಕ ನಟಿಯಾಗಿ ನಟಿಸುತ್ತಿದ್ದಾರೆಂದು ವರದಿಯಾಗಿದೆ!

ಶ್ರೀ ರೆಡ್ಡಿ ಕಳೆದ ವರ್ಷ ಪವನ್ ಕಲ್ಯಾಣ್ ಅವರನ್ನು ನಿಂದಿಸುವ ಮೂಲಕ ಪ್ರಮಾದ ಮಾಡಿದ್ದರು.  ಅಂದಿನಿಂದ ತನ್ನದೇ ಆದ ಛಾಪು ಮೂಡಿಸಲು ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದರು  ಶ್ರೀ ರೆಡ್ಡಿ.

ಇದೀಗ ‘ಕ್ಲೈಮ್ಯಾಕ್ಸ್’ ಅವರ ವೃತ್ತಿ ಜೀವನವನ್ನು ಬದಲಾಯಿಸುವುದೇ ಕಾದು ನೋಡಬೇಕಿದೆ.

ಬಿಗ್ ಸೆಲೆಬ್ರಿಟಿಯನ್ನು ಮದುವೆಯಾಗುತ್ತಾರಂತೆ ಈ ನಟಿ

#balkaninews #srireddy #climaxfilm

Tags