ಸುದ್ದಿಗಳು

ಶ್ರೀಮುರುಳಿ ಜೋಡಿಯಾಗಲಿದ್ದಾರ ಅನಂತುವಿನ ಬೆಡಗಿ…?

ಬೆಂಗಳೂರು, ಜ.18: ‘ಮದಗಜ’ ಸಿನಿಮಾ ಈಗಾಗಲೇ ಟೈಟಲ್ನಿಂದಲೇ ಬಹಳಷ್ಟು  ಫೇಮಸ್ ಆಗಿದೆ. ಅಷ್ಟೆ ಅಲ್ಲ ಈ ಸಿನಿಮಾ ಟೈಟಲ್ ಕೀಳಿದಾಗಲೇ ಅದೆಷ್ಟೋ ಅಭಿಮಾನಿಗಳು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಅಯೋಗ್ಯ’ ಚಿತ್ರದ ನಿರ್ದೇಶಕ ಮಹೇಶ್  ಭರವಸೆಯ ನಿರ್ದೇಶಕರ ಸಾಲಲ್ಲಿ ನಿಂತುಕೊಂಡಿದ್ದಾರೆ. ಇದೀಗ ಈ ಸಿನಿಮಾ ಮೂಲಕ ಮತ್ತಷ್ಟು ಹೆಸರು ಪಡೆದುಕೊಳ್ಳಲು ರೆಡಿಯಾಗಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುವ ಮೂಲಕ ಮುರುಳಿ ಜೊತೆ ಕೈ ಜೋಡಿಸಿದ್ದಾರೆ.

‘ಮದಗಜ’ ಗೆ ನಾಯಕಿ ಹುಡುಕಾಟ

ಹೌದು, ಸದ್ಯ ಶ್ರೀಮುರುಳಿ ‘ಭರಾಟೆ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು, ಅಷ್ಟೆ ಅಲ್ಲ ಈ ಸಿನಿಮಾ ಶೂಟಿಂಗ್ ಕೂಡ ಇದೀಗ ಕಂಪ್ಲೀಟ್ ಆಗಿದೆ. ಇದಾದ ನಂತರ ‘ಮದಗಜ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಮುರುಳಿ. ಇತ್ತೀಚೆಗೆ ಮೈಸೂರಿನಲ್ಲಿ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಅದ್ಧೂರಿಯಾಗಿ ನಡೆದಿದೆ. ತಾಯಿ ಚಾಮುಂಡಿಯ ಸನ್ನಿದಾನದಲ್ಲಿ ಪೂಜೆ ಮಾಡಿಸಿ ಸಿನಿಮಾ ಪ್ರಾರಂಭ ಮಾಡಲಾಗುತ್ತಿದೆ. ಇದೀಗ ಇದರ ಬೆನ್ನಲ್ಲೇ ಈ ಸಿನಿಮಾ ನಾಯಕಿ ಯಾರು ಎನ್ನುವ ಕುತೂಹಲ ಪ್ರಾರಂಭವಾಗಿದೆ.

‘ಮದಗಜ’ ನಾಯಕಿ ಲತಾ..?

ಈ ಮದಗಜ ಸಿನಿಮಾ ನಾಯಕಿಯರ ರೇಸ್‌ ನಲ್ಲಿ ಇದೀಗ ಬಹಳಷ್ಟು ಮಂದಿ ಇದ್ದಾರೆ ಎನ್ನಲಾಗುತ್ತಿದೆ. ಅಷ್ಟೆ ಅಲ್ಲ ಈ ರೇಸ್‌ ನಲ್ಲಿ ರಶ್ಮಿಕಾ ಹಾಗೂ ಶ್ರೀನಿಧಿ ಶೆಟ್ಟಿಯ ಹೆಸರು ಕೇಳಿ ಬಂದಿತ್ತು. ಆದರೆ ಯಾವುದು ಫೈನಲ್ ಆಗಿರಲಿಲ್ಲ. ಇದೀಗ ಮತ್ತೆ ಲತಾ ಹೆಗಡೆ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾ ತಂಡ ಕೂಡ ಮಾತುಕತೆ ಮಾಡಿದೆ ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ಈಗಾಗಲೇ ‘ಅನಂತು ವರ್ಸಸ್ ನಸ್ರುತ್’ ಸಿನಿಮಾದಲ್ಲಿ ಮಿಂಚುತ್ತಿರುವ ಈ ನಟಿ ಇದೀಗ ‘ಮದಗಜ’ ಸಿನಿಮಾಗೂ ನಾಯಕಿಯಾಗುತ್ತಾರಾ ಅನ್ನೋದೇ ಕುತೂಹಲ.

Tags