ಸುದ್ದಿಗಳು

‘ಭರಾಟೆ’ ಯ ಜಯರತ್ನಾಕರ ಸಾಂಗ್ ರಿಲೀಸ್

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಭರಾಟೆ’ ಚಿತ್ರವು ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಶ್ರೀಮುರುಳಿ ದ್ವಿಪಾತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.ಇದೇ ವೇಳೆ ಚಿತ್ರದ ಜಯರತ್ನಾಕರ ವಿಡಿಯೋ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಮೋಡಿ ಮಾಡುತ್ತಿದೆ. ಇನ್ನು ಈ ಹಾಡನ್ನು ನಿರ್ದೇಶಕ ಚೇತನ್ ಕುಮಾರ್ ರಚಿಸಿದ್ದು, ಸರಿಗಮಪ ಖ್ಯಾತಿಯ ಸುನೀಲ್ ಗುಜಗೊಂಡ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಅಂದ ಹಾಗೆ ಈ ಹಾಡು ಚಿತ್ರಕ್ಕೊಂದು ಟರ್ನಿಂಗ್ ಪಾಯಿಂಟ್ ನೀಡಿದೆ.ಈ ಹಿಂದೆ ‘ಭರ್ಜರಿ’, ‘ಬಹದ್ದೂರ್’ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಮೂಲಕ ಹ್ಯಾಟ್ರಿಕ್ ಗೆಲುವು ಭಾರಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶ್ರೀಲೀಲಾ, ತಾರಾ, ಸುಮನ್, ಸಾಯಿಕುಮಾರ್ ಸಹೋದರರು ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ತೆರೆಕಂಡ 4ನೇ ದಿನಕ್ಕೆ ಬರೋಬ್ಬರಿ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಭರಾಟೆ’   

Tags