ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಪ್ರೇಕ್ಷಕರ ಪಾಲಿಗೆ ಹಬ್ಬದಂಥಾ ‘ಭರಾಟೆ’!

ಚಿತ್ರ: ಭರಾಟೆ

ಕಲಾವಿದರು : ಶ್ರೀಮುರುಳಿ, ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಐಯ್ಯಪ್ಪ ಶರ್ಮ, ತಾರಾ, ಸಾಧುಕೋಕಿಲ.. ಮುಂತಾದವರು

ನಿರ್ದೇಶನ: ಚೇತನ್ ಕುಮಾರ್

ರೇಟಿಂಗ್ 4/5

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಭರಾಟೆ’ ಚಿತ್ರ ಆರಂಭದಿಂದ ಇಲ್ಲಿಯವರೆಗೆ ಸಾಗಿ ಬಂದಿರುವ ರೀತಿಯನ್ನೊಮ್ಮೆ ನೆನಪಿಸಿಕೊಳ್ಳಿ. ಅದೇನು ಕಡಿಮೆ ಸೆನ್ಸೇಷನ್ ಸೃಷ್ಟಿಸಿತ್ತಾ? ಪ್ರತೀ ಕ್ಷಣವೂ ಕುತೂಹಲದ ಉತ್ತುಂಗ ಸ್ಥಿತಿಯನ್ನೇ ಕಾಯ್ದುಕೊಂಡು ಬಂದಿರುವ ‘ಭರಾಟೆ’ ಇದೀಗ ತೆರೆ ಕಂಡಿದೆ. ಆನಂತರ ನಿರೀಕ್ಷೆ ಮಾಡಿದ್ದಕ್ಕಿಂತಲೂ ಮಜವಾದ ಕಥೆಯೊಂದಿಗೆ ನಿರ್ದೇಶಕ ಚೇತನ್ ಕುಮಾರ್ ಇದನ್ನು ರೂಪಿಸಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.‘ಭರಾಟೆ’ಯ ಚಿತ್ರೀಕರಣ ರಾಜಸ್ಥಾನದಲ್ಲಿಯೇ ಆರಂಭವಾಗಿತ್ತು. ಇದರ ಕಥೆ ಶುರುವಾಗುವುದೂ ಕೂಡಾ ರಾಜಸ್ಥಾನದಿಂದಲೇ. ಇದರಲ್ಲಿ ಶ್ರೀಮುರುಳಿ ಜಗನ್ ಎಂಬ ನಾನಾ ಶೇಡುಗಳಿರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಗನ್ ತಂದೆಯಿಂದ ಪರಂಪರಾಗತವಾಗಿ ಬಂದ ನಾಟಿ ಔಷಧಿ ವಿದ್ಯೆ ಕಲಿತುಕೊಂಡಿರುವಾತ.

ಈ ಕಾರಣದಿಂದಲೇ ಸುತ್ತ ಊರುಗಳಿಗೂ ಆಪತ್ಭಾಂಧವನಂತಿರೋ ಜಗನ್ ಅದರ ಜೊತೆಗೆ ಟೂರಿಸ್ಟ್ ಗೈಡ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಇದರ ಜೊತೆ ಜೊತೆಗೇ ಜನುಮಾಂತರಗಳ ದ್ವೇಷವೊಂದರ ಸಂಬಂಧವಾಗಿ ಮಾಸ್ ಅವತಾರವನ್ನೂ ಎತ್ತುತ್ತಿರುತ್ತಾನೆ.Image result for bharaateಹೀಗಿರುವಾಗಲೇ ಕಥೆಯ ಜಾಡು ಆತನನ್ನು ಕರ್ನಾಟಕಕ್ಕೆ ತಂದು ಬಿಡುತ್ತದೆ. ಹಾಗೆ ಬಂದು ನಿಂತವನಿಗೆ ಈ ಹಿಂದೆ ಗೈಡ್ ಆಗಿದ್ದಾಗ ಪರಿಚಯವಾಗಿದ್ದ ಗೊಂಬೆಯಂಥಾ ಹುಡುಗಿ ಮತ್ತೆ ಎದುರಾಗುತ್ತಾಳೆ. ಜಗನ್ ಆಕೆಯೊಂದಿಗೆ ಮೋಹಕ್ಕೆ ಬೀಳುತ್ತಲೇ ಅದು ಮತ್ತೊಂದಷ್ಟು ರೋಚಕ ತಿರುವುಗಳನ್ನೂ ಪಡೆದುಕೊಳ್ಳುತ್ತೆ.

ಆ ನಂತರದಲ್ಲಿ ಇಡೀ ಕಥೆ ಥರ ಥರದ ಕೊಂಬೆ ರೊಂಬೆಗಳೊಂದಿಗೆ ಒಂದರೆಡು ಕ್ಷಣವೂ ಬ್ರೇಕು ಕೊಡದಂಥಾ ಆವೇಗದೊಂದಿಗೆ ಮುಂದುವರೆಯುತ್ತೆ. ಈ ಮೂಲಕ  ಪ್ರೇಕ್ಷಕರಿಗೂ ಹೊಸಾ ಬಗೆಯ ಅನುಭವವನ್ನೇ ತುಂಬುತ್ತದೆ.

Image result for bharaateನಿರ್ದೇಶಕ ಚೇತನ್ ಈ ಮೂಲಕ ಮೂರನೇ ಚಿತ್ರದಲ್ಲಿಯೂ ಮಹಾ ಗೆಲುವನ್ನೇ ದಾಖಲಿಸಿದ್ದಾರೆ. ಅದಕ್ಕೆ ತಕ್ಕುದಾಗಿಯೇ ಅವರು ಈ ಕಥೆಯನ್ನು ರೂಪಿಸಿದ್ದಾರೆ. ಇದು ಒಂದು ಚುಂಗು ಕೈ ತಪ್ಪಿದರೂ ಇಡೀ ಕಥೆಯ ಸೂತ್ರವೇ ಕೈ ತಪ್ಪಬಹುದಾದ ಸಂಕೀರ್ಣ ಚಿತ್ರ. ಇದರಲ್ಲಿರುವ ತಾರಾಗಣವೇನು ಸಣ್ಣ ಮಟ್ಟದ್ದಲ್ಲ. ಆದರೆ ಪ್ರತಿಯೊಂದನ್ನೂ ಕೂಡಾ ಚೇತನ್ ಯಾರೂ ಬೊಟ್ಟು ಮಾಡಲು ಸಾಧ್ಯವಿಲ್ಲದಂತೆ ಅಚ್ಚುಕಟ್ಟಿನಿಂದ ರೂಪಿಸಿದ್ದಾರೆ.

ಶ್ರೀಮುರುಳಿ ಮಾಸ್ ಅಂಶಗಳ ಜೊತೆಗೆ ಪ್ರೇಮಿಯಾಗಿಯೂ ಸೇರಿದಂತೆ ಎಲ್ಲ ಛಾಯೆಗಳಿಗೂ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ಶ್ರೀಲೀಲಾ ನಟನೆಯೂ ಚೆನ್ನಾಗಿದೆ. ಖಳ ನಟರ ದಂಡಂತೂ ಪೈಪೋಟಿಗೆ ಬಿದ್ದಂತೆ ಅಬ್ಬರಿಸಿದೆ. ಒಟ್ಟಾರೆಯಾಗಿ ‘ಭರಾಟೆ’ ದೀಪಾವಳಿಗಿಂತ ಮೊದಲೇ ಹಬ್ಬ ಸೃಷ್ಟಿಸಿ ಬಿಟ್ಟಿದೆ.

ಹಿಟ್ ಆಯ್ತು ‘ಭರಾಟೆ’ ಫ್ಯಾನ್ ಮೇಡ್ ಸಾಂಗ್

Tags