ಸುದ್ದಿಗಳು

ರಾಜಸ್ಥಾನ್ ಗೆ ತೆರಳಿದ ‘ಭರಾಟೆ’ ಚಿತ್ರತಂಡ…..

ಶ್ರೀ ಮುರುಳಿ ರಾಜಸ್ಥಾನ್ ಗೆ ಹೋಗಿದ್ಯಾಕೆ..?

ರೋರಿಂಗ್ ಸ್ಟಾರ್ ಶ್ರೀ ಮುರುಳಿ ‘ಉಗ್ರಂ’ ಆದ್ಮೇಲಿಂದ ಸಖತ್ ಸಕ್ಸಸ್ ಕಾಣ್ತಿದ್ದಾರೆ. ಇದೀಗ ಅವರ ಮತ್ತೊಂದು ಸಿನಿಮಾ ಸಖತ್ ಸೌಂಡ್ ಮಾಡ್ತಿದೆ.. ಭರ್ಜರಿ ಹಾಗೂ ಬಹದ್ದೂರ್ ಸಿನಿಮಾಗಳ ನಿರ್ದೇಶಕ ಚೇತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.  ಅಲ್ಲದೇ ಸಿನಿಮಾವನ್ನ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ಮಾಡ್ತಿದ್ದಾರೆ.

ಹೀಗಾಗಿ ಭರಾಟೆ ಫೋಟೋ ಶೂಟ್ಗೆ ರಾಜಸ್ಥಾನಕ್ಕೆ ಹಾರಿದ್ದು, ವಿಭಿನ್ನವಾಗಿ ಸಿನಿಮಾದ ಫೋಟೋ ಶೂಟ್ ಮಾಡಿದ್ದಾರೆ. ರಾಜಸ್ಥಾನದಲ್ಲೇ ಭರಾಟೆ ಫೋಟೋ ಶೂಟ್ ಮಾಡೋಕು ಒಂದು ಕಾರಣ ಇದೆ.. ಹೌದು ಭರಾಟೆ ಪಕ್ಕಾ ಫ್ಯಾಮಿಲಿ ಸಿನಿಮಾ.. ಈ ಮೂವಿ ಎಲ್ಲಾ ರೀತಿಯ ಪ್ರೇಕ್ಷಕರನ್ನು  ಸೆಳೆಯುತ್ತಂತೆ. ವಿಶೇಷ ಅಂದ್ರೆ ಈ ಕಲರ್ಫುಲ್ ಭರಾಟೆ ಮೂವಿ ಶುರುವಾಗೋದೇ ರಾಜಸ್ಥಾನದಿಂದ. ಹೀಗಾಗಿ ಚಿತ್ರದ ಫೋಟೋ ಶೂಟ್ ಅನ್ನ ಎರಡು ದಿನ ರಾಜಸ್ಥಾನದಲ್ಲೇ ಮಾಡಿದ್ದಾರೆ. ಅಲ್ಲದೇ 22 ದಿನ ರಾಜಸ್ಥಾನದಲ್ಲಿ ಶೂಟಿಂಗ್ ನಡೆಯುತ್ತಂತೆ.

ರೋರಿಂಗ್ ಸ್ಟಾರ್ ಜೊತೆ ಕಿಸ್ ಚೆಲುವೆ…

ಸ್ಯಾಂಡಲ್ವುಡ್ನಲ್ಲಿ ಸಿನಿಮಾದ ಫೋಟೋ ಶೂಟ್ಗೆ ಅಂತ ಬೇರೆ ರಾಜ್ಯಕ್ಕೆ ಹೋದ ಉದಾಹಾರಣೆ ತುಂಬಾ ಕಡಿಮೆ. ಆದ್ರೆ ನಿರ್ದೇಶಕ ಚೇತನ್ ಕುಮಾರ್ ರಾಜಸ್ಥಾನದ ಅದ್ಭುತ ಲೊಕೇಷನ್ಗಳಲ್ಲಿ ಭರಾಟೆ ಫೋಟೋ ಶೂಟ್ ಮಾಡಿದ್ದಾರೆ. ಚಿತ್ರದಲ್ಲಿ ಮುರುಳಿಗೆ ಕಿಸ್ ಸಿನಿಮಾದ ಚೆಲುವೆ ಶ್ರೀಲೀಲಾ ಜೋಡಿಯಾಗಿದ್ದು, ಇವ್ರಿಬ್ರ ಕಾಂಬಿನೇಷನ್ ಮೋಡಿ ಮಾಡೋದಂತು ಪಕ್ಕಾ… ಇನ್ನೂ ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.  ಹೀಗಾಗಿ ಭರಾಟೆ ಹೇಗಿರಲಿದೆ ಶ್ರೀಲೀಲಾ ಹಾಗೂ ಶ್ರೀಮುರುಳಿ ಕೆಮಿಸ್ಟ್ರಿ ಹೇಗೆ ವರ್ಕೌಟ್ ಆಗಲಿದೆ ಅಂತಾ ಪ್ರೇಕ್ಷಕರು ಕಾದು ಕುಳಿತಿದ್ದಾರೆ…

Tags