ಸುದ್ದಿಗಳು

ರೋರಿಂಗ್ ಸ್ಟಾರ್ 37 ನೇ ವರ್ಷದ ಜನ್ಮದಿನಕ್ಕೆ 37 ವಿಶೇಷಗಳು!!

5th ಬ್ಲಾಕ್ ನಲ್ಲಿರೋ ಶಾಲಿನಿ ಆಟದ ಮೈದಾನ !!

ಬೆಂಗಳೂರು,ಡಿ.15: ಇದೇ ತಿಂಗಳು 17 ರಂದು ಚಂದನವನದ ರೋರಿಂಗ್ ಸ್ಟಾರ್ ಶ್ರೀ ಮುರಳಿಯ ಹುಟ್ಟುಹಬ್ಬ… 37 ನೇ ವರ್ಷದ ಜನ್ಮದಿನವನ್ನು  ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಶ್ರೀ ಮುರಳಿಗೆ ಬಹಳಷ್ಟು ಜನ ಫ್ಯಾನ್ಸ್ ಗಳಿದ್ದಾರೆ.. ‘ಉಗ್ರಂ’, ‘ರಥಾವರ’, ಮಫ್ತಿಯಂತಹ ಹಿಟ್ ಸಿನಿಮಾ ನೀಡಿದ ನಂತರ ಈಗ ಬಹದ್ದೂರ್​​​​​ ಚೇತನ್​​ ನಿರ್ದೇಶನದ ‘ಭರಾಟೆ’ ಸಿನಿಮಾದಲ್ಲಿ ಬ್ಯುಸಿ…ಇದೇ ದಿನ ‘ಮದಗಜ’ ಹಾಗೂ ‘ಭರಾಟೆ’ ಸಿನಿಮಾದ ಸಮಾರಂಭ ನಡೆಯಲಿದೆ..

37 ನೇ ವರ್ಷಕ್ಕೆ ಕಾಲಿಡುತ್ತಿರೋ ಶ್ರೀಮುರುಳಿ

ಡಿಸೆಂಬರ್​​ 17 ನೇ ತಾರೀಖಿನಂದು ಶ್ರೀ ಮುರಳಿಯ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮಗಳಿವೆ.. ಜಯನಗರದ 5th ಬ್ಲಾಕ್​​ನಲ್ಲಿರೋ ಶಾಲಿನಿ ಆಟದ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶ್ರೀಮುರುಳಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 37 ನೇ ವರ್ಷಕ್ಕೆ ಕಾಲಿಡುತ್ತಿರೋ ಶ್ರೀಮುರುಳಿ ಹುಟ್ಟುಹಬ್ಬಕ್ಕೆ 37 ಸ್ಪೆಷಲ್ ಇದೆ..

  1. ಅಭಿಮಾನಿಗಳ ಜೊತೆಗೆ 37 ಕೆ.ಜಿ ತೂಕದ ಕೇಕ್​​ ಕತ್ತರಿಸಲಿದ್ದಾರೆ.
  2. ಅಭಿಮಾನಿಗಳಿಂದ 37 ಜನ ಅಂಗವಿಕಲರಿಗೆ ಧನ ಸಹಾಯ..
  3. ಅಭಿಮಾನಿಗಳಿಂದ 37 ಜನ ಮಂಗಳಮುಖಿಯರಿಗೆ ಸೀರೆ ವಿತರಣೆ
  4. ಅಭಿಮಾನಿಗಳಿಂದ 37,000 ರುಪಾಯಿ ವೆಚ್ಚದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
  5. ಅಭಿಮಾಗಳಿಂದ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ನಿರಂತರವಾಗಿ ಅನ್ನದಾನ ನಡೆಯಲಿದೆ..

 

View this post on Instagram

 

Ondh information about ma Birthday 17/12/2018 “Idhu Namm yalla Abhimanigalligagi” from #TeamBharaate and #TeamMadhaGaja

A post shared by SriiMurali (@sriimurali) on

Tags