ಸುದ್ದಿಗಳು

‘ಯೂಥ್ ಪಿಲ್ಲರ್ ಆಫ್ ದಿ ನೇಷನ್ ಟ್ರಸ್ಟ್’ ಗೆ ನೀವು ಜಾಯಿನ್ ಆಗಿ..

ಎಂಟರ್ ದೇಶ ತಿರುಗುವಂತೆ ಮಾಡೋಣಾ ಎಂದ ಶ್ರೀ ಮುರುಳಿ

ಬೆಂಗಳೂರು.ಡಿ.15: ‘ನಿಮ್ಮ ಹಳ್ಳಿ ಆಗಬಹುದು ದಿಲ್ಲಿ, ದಿ ಬೆಸ್ಟ್ ಅನಿಸಬಹುದು ನಮ್ಮ ರೈತ, ನಮಗ್ ಕಲಿಸದಂತ ಶಿಕ್ಷಕರು ಸೂಪರ್ ಅನಿಸಬಹುದು..ಇದೆಲ್ಲಾ ಹೇಗ್ ಸಾಧ್ಯ ಯೋಚಿಸುತ್ತಿದ್ದಿರಲ್ಲಾ, ಅದನ್ನು ನಾನು ಹೇಳಿಕೊಡ್ತಿನಿ” ಎಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೇಳುತ್ತಾರೆ.

ಯೂಥ್ ಪಿಲ್ಲರ್ ಆಫ್ ದಿ ನೇಷನ್

“ಇದೊಂದು ವಂಡರ್ ಫುಲ್ ಐಡಿಯಾ, ಹೀಗಾಗಿ ನಾನು ಮನಸಾರೆ ಜಾಯಿನ್ ಆಗಿದ್ದೀನಿ, ನೀವೂ ಜಾಯಿನ್ ಆಗಿ. ಇದರಿಂದ ಎಂಟರ್ ದೇಶ ತಿರುಗುವಂತೆ ಮಾಡಬಹುದು. ನೀವು ಮಾಡಬೇಕಾಗಿದ್ದು ಇಷ್ಟೇ, ಇದರಿಂದ ಒಳ್ಳೆಯದಾಗುತ್ತದೆ. ಇದೊಂದು ವಂಡರ್ ಫುಲ್ ಐಡಿಯಾ ಆಗಿದ್ದು, ರೈತರು ಮತ್ತು ಶಿಕ್ಷಕರಿಗೆ ಒಳ್ಳೆಯದಾಗುತ್ತದೆ. ಈ ಬಗ್ಗೆ ನಾನು ನನ್ನ ಹುಟ್ಟು ಹಬ್ಬದ ದಿನ, ಅಂದರೆ, ಡಿ. 17 ರಂದು ಎಲ್ಲಾ ಮಾಹಿತಿ ನೀಡುತ್ತೇನೆ” ಎಂದು ಶ್ರೀಮುರುಳಿ ಹೇಳಿದ್ದಾರೆ.

 

View this post on Instagram

 

I’m with #YouthPillarsOfTheNationTrust Neevu saha serikolli!

A post shared by SriiMurali (@sriimurali) on

 

ಡಿ.17 ರಂದು ಕಾರ್ಯಕ್ರಮಗಳು

ಇನ್ನು ಇದೇ ಡಿ. 17 ರಂದು ಶ್ರೀ ಮುರುಳಿಯವರ 37 ನೇ ವರ್ಷದ ಜನ್ಮದಿನವಿದ್ದು, ಅಂದು ‘ಯೂಥ್ ಪಿಲ್ಲರ್ ಆಫ್ ದಿ ನೇಷನ್ ಟ್ರಸ್ಟ್’ ಬಗ್ಗೆ ಮಾಹಿತಿ ನೀಡುತ್ತಾರೆ. ಇದರೊಂದಿಗೆ ಅವರ ನಟನೆಯ ಸಿನಿಮಾಗಳಾದ ‘ಭರಾಟೆ’ ಟೀಸರ್ ಬಿಡುಗಡೆಗೊಳ್ಳಲಿದ್ದು, ‘ಮದಗಜ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದೆ.

ಇದರೊಂದಿಗೆ ಆ ದಿನ, ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಜಯನಗರದ 5 ನೇ ಬ್ಲಾಕ್ ನಲ್ಲಿರುವ ಶಾಲಿನಿ ಆಟದ ಮೈದಾನದಲ್ಲಿ ತಮ್ಮ 37 ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

ಹಾಗೆಯೇ ಅವರ ಅಭಿಮಾನಿಗಳು 37 ಜನ ಅಂಗವಿಕಲರಿಗೆ ಧನ ಸಹಾಯ ಮಾಡಲಿದ್ದು, 37 ಜನ ಮಂಗಳಮುಖಿಯರಿಗೆ ಸೀರೆ ವಿತರಣೆ ಮಾಡಲಿದ್ದಾರೆ, 37,000 ರುಪಾಯಿ ವೆಚ್ಚದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಿದ್ದಾರೆ. ಇದಲ್ಲದೇ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.

Tags