ಸುದ್ದಿಗಳು

ಶ್ರೀನಿವಾಸ ಕಲ್ಯಾಣಂ ಚಿತ್ರಕ್ಕೆ ಯಾವಾಗ ಬಿಡುಗಡೆ ಭಾಗ್ಯ?

ತೆಲುಗು ಖ್ಯಾತಿಯ ನಟ ನಿತಿನ್ ಅವರ ಮುಂಬರುವ ಚಿತ್ರ ‘ಶ್ರೀನಿವಾಸ ಕಲ್ಯಾಣಂ’ ಟಾಲಿವುಡ್ನಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತು. ‘ಶತಮಾನಂ ಭವತಿ’ ಖ್ಯಾತಿಯ ಸತೀಶ್ ವಿಗ್ನೇಷಯ ನಿರ್ದೇಶನದ ಈ ಚಿತ್ರವು ಒಂದು ಪ್ರೇಮ ಕಥೆಯನ್ನು ಹೊಂದಿದೆ. ಜುಲೈ 27 ರಂದು ತೆರೆ ಕಾಣಬೇಕಿದ್ದ ‘ಶ್ರೀನಿವಾಸ ಕಲ್ಯಾಣಂ’ ಇತ್ತೀಚಿನ ಸುದ್ದಿಯ ಪ್ರಕಾರ ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ. ಇದರ ಹಿಂದಿರುವ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಮೂಲಗಳ ಪ್ರಕಾರ ನಿರ್ಮಾಪಕರು ಸಂತೋಷದಿಂದ ಇದ್ದಾರೆ, ಏಕೆಂದರೆ  ಅವರಿಗೆ ಸಿನಿಮಾದಲ್ಲಿ ಕೆಲಸ ಮಾಡಲು ಸಾಕಷ್ಟು ಸಮಯ ಸಿಗುತ್ತದೆ  ಹಾಗೂ ಪ್ರಚಾರವನ್ನು ಇನ್ನಷ್ಟು ಮಾಡಬಹುದು.

ರಾಶಿ ಖನ್ನಾ ಚಿತ್ರದಲ್ಲಿ ನಿತಿನ್ ನೊಂದಿಗೆ ರೊಮ್ಯಾನ್ಸ್  ಮಾಡಲಿದ್ದಾರೆ. ಈ ಚಿತ್ರದಲ್ಲಿ ನಂದಿತಾ ಶ್ವೇತಾ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಮಿಕ್ಕಿ ಜೆ ಅವರ ಸಂಗೀತವೂ ಇದೆ. ದಿಲ್ ರಾಜು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿತಿನ್ ಮತ್ತು ದಿಲ್ ರಾಜು ಈ ಯೋಜನೆಯಲ್ಲಿ 10 ವರ್ಷದ ನಂತರ ಮತ್ತೆ ಒಂದಾಗುತ್ತಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *