ಸುದ್ದಿಗಳು

ತೆಲುಗು ಮಹಿಳೆಯರು, ನಮಗೆ ಈ ವ್ಯಕ್ತಿಯ ಅಗತ್ಯವಿದೆಯೇ? : ಶ್ರೀ ರೆಡ್ಡಿ

ಆಂಧ್ರ,ಆ.19: ವಿವಾದಾತ್ಮಕ ಟಾಲಿವುಡ್ ನಟಿ ಶ್ರೀ ರೆಡ್ಡಿ ಈಗ ಎಲ್ಲರ ಕೇಂದ್ರಬಿಂದುವಾಗಿದ್ದಾಳೆ.  ಕಾಸ್ಟಿಂಗ್ ಕೌಚ್ ವಿರುದ್ದ ಹತ್ತತಾರು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾನೆ ಇರುತ್ತಾಳೆ.. ಇತ್ತೀಚೆಗೆ ರಾಜಕಾರಣಿ ಹಾಗೂ ನಟ ಪವನ್ ಕಲ್ಯಾಣ್ ಅವರ ತಾಯಿಯೊಡನೆ ಅಸಭ್ಯವಾದ ಮಾತುಗಳನ್ನಾಡಿದರು. ನಂತರ, ಶ್ರೀ ರೆಡ್ಡಿ ಅವರನ್ನು ಮುಖ್ಯವಾಹಿನಿಯಿಂದ ದೂರವಿಡಲಾಯಿತಾದರೂ, ಅವರು ಟಾಲಿವುಡ್ ಮತ್ತು ಕಾಲಿವುಡ್ ಉದ್ಯಮದ ಪ್ರಸಿದ್ಧ ವ್ಯಕ್ತಿಗಳ ಮೇಲೆ ಆರೋಪಗಳನ್ನು ಮುಂದುವರೆಸುತ್ತಲೇ ಬಂದಿದ್ದಾರೆ.

ಇತ್ತೀಚೆಗೆ ಒಂದು ಹೊಸ ಬಾಂಬ್ ಸ್ಪೋಟ ಮಾಡಿದ್ದಾಳೆ., ಶ್ರೀ ರೆಡ್ಡಿ, ಪವನ್ ಕಲ್ಯಾಣ್ ರ ಒಂದು ಸೀರೆ ಧರಿಸಿದ್ದ ಫೋಟೋವೊಂದನ್ನು ಪೋಸ್ಟ್ ಮಾಡಿದರು ಮತ್ತು ಅದನ್ನು ‘ಪಿಕೆ ಕಿ ಬಾಗ ಇಷ್ಟಮಾಯಿನ ಗೆಟ್ ಅಪ್..’ ಎಂದು ಟ್ಯಾಗ್ ಮಾಡಿದ್ದಾಳೆ. ಜನ ಸೇನಾ ಸಂಸ್ಥಾಪಕರೊಂದಿಗೆ ಆರು ಮಹಿಳೆಯರ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಪವನ್ ಅಭಿಮಾನಿಗಳ ಕ್ರೋಧವನ್ನು ಕೆರೆಳಿಸಿದ್ದಾಳೆ. ಇಷ್ಟೇ ಸಾಲದು ಅಂತಾ ಒಂದು ಕಾಮೆಂಟ್ ಅನ್ನು ಸೇರಿಸಿದ್ದಾಳೆ – ‘ತೆಳುಗಿಂಟಿ ಆಡಬಿಡ್ಡಲ್ಲರಾ … ಇಥನು ಮನುಕು ಅವಸರಮಾ?’ (ತೆಲುಗು ಮಹಿಳೆಯರು, ನಮಗೆ ಈ ವ್ಯಕ್ತಿಯ ಅಗತ್ಯವಿದೆಯೇ?) ಎಂದು ಬರೆದಿದ್ದಾರೆ

Tags