ಸುದ್ದಿಗಳು

ಕೈಯಲ್ಲೊಂದು ಚಿತ್ತಾರ.. ಶ್ರೀರೆಡ್ಡಿಯ ಕೈಯಲ್ಲಿ ಟ್ಯಾಟೂ ಮಹಿಮೆ….

ಟ್ಯಾಟೂ ನೋಡಿ ಅಭಿಮಾನಿಗಳು ಫಿದಾ…

ಶ್ರೀರೆಡ್ಡಿ ತಮ್ಮ ಎಡತೋಳಿನ ಮೇಲೆಟ್ಯಾಟೂ’ವೊಂದನ್ನು ಹಾಕಿಸಿಕೊಂಡಿದ್ದಾರೆ..

 ಹೈದರಾಬಾದ್,ಸೆ.03: ಶ್ರೀ ರೆಡ್ಡಿ ಕೊಂಚ ಸುದ್ದಿಯಿಂದ ದೂರ ಇದ್ದಾಳೆ ಎಂದು ಎಂದುಕೊಳ್ಳುವಾಗಲೇ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಈ ಬಾರಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಲು ಬಂದಿಲ್ಲ. ಬದಲಾಗಿ ಹಾಟ್​ನೆಸ್ ಹಾಗೂ ಬೋಲ್ಡ್​ ಫೋಟೋಗಳಿಗೆ ಫೋಸ್​​ ನೀಡುವುದರ ಮೂಲಕ ಶ್ರೀ ರೆಡ್ಡಿ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ನಟಿ ಶ್ರೀರೆಡ್ಡಿ ಬೋಲ್ಡ್ ಫೋಟೋಗಳಿಗೆ ಪೋಸ್ ನೀಡುವುದರಲ್ಲಿ ಎತ್ತಿದ ಕೈ.

ಕಾಸ್ಟಿಂಗ್ ಕೌಚ್ವಿರುದ್ಧ ಧ್ವನಿ

ಹೌದು, ಬಾಲಿವುಡ್​ ಸೇರಿದಂತೆ ಬಹುತೇಕ ಚಿತ್ರರಂಗದಲ್ಲಿ ಶ್ರೀರೆಡ್ಡಿ ಹೆಸರು ಎಲ್ಲರಿಗೂ ಗೊತ್ತು. ಕಾಸ್ಟಿಂಗ್ ಕೌಚ್​ ವಿರುದ್ಧ ಧ್ವನಿ ಎತ್ತುವ ದಿಟ್ಟ ಮಹಿಳೆಯಾದರೆ,ಇನ್ನೊಂದೆಡೆ ಎಲ್ಲವನ್ನು ಕಟಕ್ ಆಗಿ ಹೇಳುವ ನೇರವಂತಿಕೆಯ ಜತೆಗೆ ಅವರ ಚಿತ್ರ-ವಿಚಿತ್ರ ಫೋಟೋ, ವಿಡಿಯೋಗಳು ಸಾಕಷ್ಟು ಸುದ್ದಿಯಾಗುತ್ತಿವೆ. ಈಗ ಇದಕ್ಕೆ ಹೊಸ ಸೇರ್ಪಡೆಯೊಂದಾಗಿದೆ. ಅದೇನಂತೀರಾ? ಮುಂದೆ ಓದಿ..

ಟ್ಯಾಟೂ ಮಹಿಮೆ..

ಶ್ರೀರೆಡ್ಡಿ ತಮ್ಮ ಎಡತೋಳಿನ ಮೇಲೆ ‘ಟ್ಯಾಟೂ’ವೊಂದನ್ನು ಹಾಕಿಸಿಕೊಂಡಿದ್ದಾರೆ. ಇದನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ. ಆದರೆ, ಈ ಫೋಟೋದಲ್ಲಿ ಅವರು ಸ್ವಲ್ಪ ಹೆಚ್ಚು ಎಕ್ಸ್​​ಪೋಸ್​​ ಮಾಡಿರುವಂತೆ ಕಾಣಿಸುತ್ತಿದೆ.. ಇದನ್ನು ನೋಡಿದ ಅಭಿಮಾನಿಗಳ ಹೃದಯ ಚೂರಾಗಿದೆ. ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ಕಾಮೆಂಟ್ಸ್ ಬರುತ್ತಿವೆ..

Tags