ಸುದ್ದಿಗಳು

ಅಂದು ಆತನಿಂದ ಲೈಂಗಿಕ ಕಿರುಕುಳ… ಈಗ ಆತನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ರೆಡ್ಡಿ!!

'ಲಾರೆನ್ಸ್ ಗಾರು ನಿಮಗೆ ಹುಟ್ಟುಹಬ್ಬದ ಶುಭಾಶಯಗಳು…

ಹೈದರಾಬಾದ್,ಅ.30​: ಟಾಲಿವುಡ್​ ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಮಾಡಿರುವ ಪ್ರತಿಭಟನೆ ಅಷ್ಟಿಷ್ಟಲ್ಲ.. ದಕ್ಷಿಣ ಭಾರತದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದರು ಈಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಅಂತೂ ಅಲ್ವೇ ಅಲ್ಲ… ಬದಲಾಗಿ ಬರ್ತ್​ ಡೇ ವಿಶ್​ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ..

ಲೈಂಗಿಕ ಕಿರುಕುಳ

ಹೌದು, ಶ್ರೀ ರೆಡ್ಡಿ ಇತ್ತೀಚೆಗೆ ತನಗೆ ಲೈಂಗಿಕ ಕಿರುಕುಳ ಆಗಿದೆ ಎಂದು ಹೇಳಿ ಚಿತ್ರರಂಗದಲ್ಲಿದ್ದ ಅನೇಕರ ಕರಾಳ ಮುಖವನ್ನು ಬಯಲಿಗೆ ಎಳೆದಿದ್ದಳು. ಹೀಗೆ ಶ್ರೀ ರೆಡ್ಡಿ ಬಹಿರಂಗ ಪಡಿಸಿದ್ದ ಹೆಸರುಗಳಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಘವಾ ಲಾರೆನ್ಸ್​ ಅವರ ಹೆಸರಿತ್ತು. ಲಾರೆನ್ಸ್​ವಿರುದ್ಧ ನೇರವಾಗಿ ಆರೋಪ ಮಾಡಿ, ಆತನಿಂದ ನನಗೆ ಲೈಂಗಿಕ ಕಿರುಕುಳ  ಆಗಿದೆ ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಈತನ ವಿರುದ್ದ ಇಷ್ಟೆಲ್ಲಾ ಬಾಯಿಬಡಿದುಕೊಂಡಿದ್ದ ರೆಡ್ಡಿ ಏನು ಮಾಡಿದಳು ಗೊತ್ತಾ??

Related image
ಲಾರೆನ್ಸ್​​ ಹುಟ್ಟು ಹಬ್ಬಕ್ಕೆ ಶುಭಾಶಯ..
ರಾಘವಾ ಲಾರೆನ್ಸ್ ವಿರುದ್ಧ ಆರೋಪ ಮಾಡಿದ್ದ ಶ್ರೀ ರೆಡ್ಡಿ ಈಗ ಅವರ ಜನ್ಮದಿನದಕ್ಕೆ ಶುಭಾಶಯಗಳನ್ನು ತಿಳಿಸಿದ್ದಾಳೆ. ‘ಲಾರೆನ್ಸ್​ಗಾರು ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಿಂದ ಇನ್ನೂ ಹೆಚ್ಚಿನ ಹಿಟ್​ ಚಿತ್ರಗಳನ್ನು ನಿರೀಕ್ಷಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಆತನ ವಿರುದ್ಧ ಸಿಕ್ಕಾಪಟ್ಟೆ ಫೈರ್ ಮಾಡಿದ್ದ ರೆಡ್ಡಿಯನ್ನು ನೋಡಿದರೆ ಈಕೆಗೆ ಆತನಿಂದ ಲೈಂಗಿಕ ಕಿರುಕುಳ ಆಗಿದ್ದು ನಿಜವೇ ಎಂದು ಅನುಮಾನ ಹುಟ್ಟುವುದು ಸಹಜ…

ಶ್ರೀರೆಡ್ಡಿಯ ಈ ಬೆಳವಣಿಗೆಯನ್ನು ಕಂಡು ನೆಟ್ಟಿಗರು ಶ್ರೀ ರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಾರೆ

Tags